Bhalki, Bidar : KPCC ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ (Eshwara Khandre) ಅವರ ಅಭಿಮಾನಿಗಳು ಹಾಗೂ Congress ಕಾರ್ಯಕರ್ತರು ಶನಿವಾರ ತಾಲ್ಲೂಕಿನಲ್ಲಿ ಖಂಡ್ರೆ ಜನ್ಮದಿನ ಪ್ರಯುಕ್ತ ಬಂಟಿ ದರಬಾರೆ ಅಭಿಮಾನಿ ಬಳಗದ ವತಿಯಿಂದ ಬೀದರ್ ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಆಯೋಜಿಸಿದ ರಕ್ತದಾನ ಶಿಬಿರದಲ್ಲಿ (Blood Donation Camp) ರಕ್ತದಾನ ಮಾಡಿದರು. ಔರಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ, ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿದರು.
ಪ್ರಶಾಂತ ದರ್ಬಾರೆ, ಸುದೀಪ, ಶಾದುಲ್, ರೋಹಿತ ಕಾಂಬಳೆ, ರತ್ನದೀಪ ಕಸ್ತೂರೆ, ಶಾಲಿವಾನ ಸೂರ್ಯವಂಶಿ, ಸಾಯಿಕುಮಾರ ಘೋಡ್ಕೆ, ಸತೀಶಕುಮಾರ ಘೋಡ್ಕೆ, ಶಿವಕುಮಾರ ಪಾಟೀಲ, ಆನಂದ ಬ್ಯಾಳೆ, ರತಿಕಾಂತ ಮೇತ್ರೆ, ಅಮರ ಬಾಬಳಿ, ರಾಜಕುಮಾರ ಬಾಬಣೆ, ಅಮಜತ್ ಪಠಾಣ್ ಉಪಸ್ಥಿತರಿದ್ದರು.