back to top
26.2 C
Bengaluru
Friday, July 18, 2025
HomeBusinessBharat Biotech ಅಭಿವೃದ್ಧಿಪಡಿಸಿದ Cholera Vaccine 'Hillchol' - 3ನೇ ಹಂತದ ಪ್ರಯೋಗ ಯಶಸ್ವಿ

Bharat Biotech ಅಭಿವೃದ್ಧಿಪಡಿಸಿದ Cholera Vaccine ‘Hillchol’ – 3ನೇ ಹಂತದ ಪ್ರಯೋಗ ಯಶಸ್ವಿ

- Advertisement -
- Advertisement -

Hyderabad: ಭಾರತ್ ಬಯೋಟೆಕ್ (Bharat Biotech) ಕಂಪನಿಯು ಕಾಲರಾ ರೋಗ ತಡೆಯಲು ಓರಲ್ ಲಸಿಕೆ ‘ಹಿಲ್ಚೋಲ್’ ಅನ್ನು (Cholera Vaccine ‘Hillchol) ಅಭಿವೃದ್ಧಿಪಡಿಸಿದೆ. ಈ ಲಸಿಕೆಯ ಮೂರನೇ ಹಂತದ ಪ್ರಯೋಗಗಳು ಯಶಸ್ವಿಯಾಗಿ ನಡಿದವು. ಕಾಲರಾ ಉಂಟುಮಾಡುವ ಒಗಾವಾ ಮತ್ತು ಇನಾಬಾ ಬಾಕ್ಟೀರಿಯಾ ವಿರುದ್ಧ ಇದು ಪರಿಣಾಮಕಾರಿ ಎಂದು ಕಂಡು ಬಂದಿದೆ. ಈ ಲಸಿಕೆ ಮಕ್ಕಳ ಮತ್ತು ವಯಸ್ಕರನ್ನೂ ರಕ್ಷಿಸುತ್ತದೆ.

ಮೂರು ಹಂತದ ಪ್ರಯೋಗಗಳಲ್ಲಿ, ದೇಶದ 10 ಭಾಗಗಳಲ್ಲಿ 1800 ಜನರ ಮೇಲೆ ಈ ಲಸಿಕೆಯನ್ನು ಪರೀಕ್ಷಿಸಲಾಯಿತು. ಲಸಿಕೆ ಪಡೆದವರಿಗೆ ರೋಗ ತಡೆಯುವ ಶಕ್ತಿ ಹೆಚ್ಚಾಗಿ, ಯಾವುದೇ ದೋಷಗಳು ಕಂಡುಬಂದಿಲ್ಲ. ಈ ಕಾರಣದಿಂದಲೂ ಲಸಿಕೆ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ. ನಿಯಂತ್ರಕ ಸಂಸ್ಥೆಗಳ ಅನುಮತಿ ಪಡೆದ ಬಳಿಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಹಿಲ್ಚೋಲ್ ಲಸಿಕೆಯ ಮೂಲಕ ಕಾಲರಾ ನಿಯಂತ್ರಣ ಸಾಧ್ಯವಾಗುತ್ತದೆ. ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್‌ನ ಕಾರ್ಯನಿರ್ವಹಣಾಧಿಕಾರಿ ಡಾ. ಕೃಷ್ಣ ಎಲಾ, “ಲಸಿಕೆ ಸಿಗದೇ ಇದ್ದರೆ ಕಾಲರಾ ಸಮಸ್ಯೆ ಹೆಚ್ಚಾಗಬಹುದು. ಈ ಲಸಿಕೆ ಕಡಿಮೆ ವೆಚ್ಚದಲ್ಲಿ ಲಭ್ಯವಿದ್ದು, ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಹಾಯಮಾಡಲಿದೆ” ಎಂದು ಹೇಳಿದ್ದಾರೆ.

ಕಾಲರಾ ರೋಗ ವರ್ಷಕ್ಕೆ 28 ಲಕ್ಷ ಜನರಿಗೆ ಅಂಟಿಕೊಳ್ಳುತ್ತದೆ ಮತ್ತು ಸುಮಾರು 95,000 ಜನರು ಈ ರೋಗದಿಂದ ಸಾವಿಗೀಡಾಗುತ್ತಾರೆ. ಪ್ರಸ್ತುತ, ಒಂದೇ ಒಂದು ಕಂಪನಿ ಈ ಲಸಿಕೆಯನ್ನು ಪೂರೈಸುತ್ತಿದೆ, ಆದ್ದರಿಂದ ಲಸಿಕೆ ಲಭ್ಯತೆ ಸವಾಲಾಗಿರುತ್ತದೆ. ಭಾರತ್ ಬಯೋಟೆಕ್ ತನ್ನ ಹೈದರಾಬಾದ್ ಮತ್ತು ಭುವನೇಶ್ವರ ಘಟಕಗಳಲ್ಲಿ ವರ್ಷಕ್ಕೆ 20 ಕೋಟಿ ಡೋಸ್ ಲಸಿಕೆ ಉತ್ಪಾದಿಸಲು ಸಜ್ಜಾಗಿದೆ.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page