ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ – ಡಿಸಿಜಿಐ (Drug Controller General of India – DCGI) ಶನಿವಾರ (25 December 2021) ಭಾರತ್ ಬಯೋಟೆಕ್ (Bharat Biotech) ಸಿದ್ಧಪಡಿಸಿರುವ ಕೋವಾಕ್ಸಿನ್ ಕೋವಿಡ್-19 ಲಸಿಕೆಯನ್ನು (Covaxin Covid-19 Vaccine) 12-18 ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಬಳಕೆಗೆಗಾಗಿ ಅನುಮತಿ ನೀಡಿದೆ. Covaxin ಅನ್ನು ಮಕ್ಕಳಿಗಾಗಿ ತುರ್ತು ಬಳಕೆಗೆ ನೀಡಲು ವಿಷಯ ತಜ್ಞರ ಸಮಿತಿಯು (SEC), DCGI ಗೆ ಶಿಫಾರಸು ಮಾಡಿತ್ತು.
ವಯಸ್ಕರಿಗೆ ನೀಡಿದಂತೆಯೇ ಕೋವಾಕ್ಸಿನ್ ಅನ್ನು ಮಕ್ಕಳಿಗೆ 28 ದಿನಗಳ ಅಂತರದೊಂದಿಗೆ ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಸರ್ಕಾರಕ್ಕೆ ಸಲ್ಲಿಸಿದ ಪ್ರಾಯೋಗಿಕ ಮಾಹಿತಿಯ ಪ್ರಕಾರ, ಎರಡು ಡೋಸ್ ಲಸಿಕೆ ನೀಡಿಕೆಯ ಮಧ್ಯದ ಅಂತರ ಮತ್ತು ಡೋಸೇಜ್ ವಯಸ್ಕರು ಮತ್ತು ಮಕ್ಕಳಿಗೆ ಒಂದೇ ಆಗಿದೆ.
ಕೋವಾಕ್ಸಿನ್ ಈಗ ಭಾರತದಲ್ಲಿ ಮಕ್ಕಳಿಗೆ ಬಳಸಲು ತೆರವುಗೊಳಿಸಲಾದ ಎರಡನೇ ಲಸಿಕೆಯಾಗಿದೆ. ಆಗಸ್ಟ್‌ನಲ್ಲಿ, ಝೈಡಸ್ ಕ್ಯಾಡಿಲಾ (Zydus Cadila) ಅವರ ಮೂರು-ಡೋಸ್ ಡಿಎನ್‌ಎ ಲಸಿಕೆಯನ್ನು (DNA Vaccine) ವಯಸ್ಕರು ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಬಳಸಲು ಅನುಮತಿ ನೀಡಲಾಗಿತ್ತು.