Bengaluru: ನಗರದಲ್ಲಿ ಪ್ರತಿನಿತ್ಯ ಸುಮಾರು 14ರಿಂದ 16 ದ್ವಿಚಕ್ರ (two-wheelers) ವಾಹನಗಳು ಕಳವಾಗುತ್ತಿದ್ದು, ಮೂರು ವರ್ಷಗಳಲ್ಲಿ 13,628 ವಾಹನಗಳು ಕಳ್ಳರ ಪಾಲಾಗಿವೆ.
ರಸ್ತೆ ಬದಿ, (roadside) ಪಾರ್ಕಿಂಗ್ ಸ್ಥಳ, (parking lot) ಬಸ್ ನಿಲ್ದಾಣ (bus stand) ಹಾಗೂ ಮನೆ ಮುಂದೆ ನಿಲ್ಲಿಸುತ್ತಿರುವ ಬೈಕ್ಗಳನ್ನು (bike) ಕಳ್ಳರು ನಿರಂತರವಾಗಿ ಕಳವು ಮಾಡುತ್ತಿದ್ದಾರೆ.
ಕದ್ದ ಬೈಕ್ಗಳ ನಂಬರ್ ಪ್ಲೇಟ್, (number plate) ಎಂಜಿನ್ ನಂಬರ್ (engine number) ಬದಲಿಸಿ ಆರೋಪಿಗಳು ಹೊರರಾಜ್ಯಗಳಲ್ಲಿ ಮಾರಾಟ ಮಾಡುತ್ತಿರುವುದರಿಂದ ಪತ್ತೆ ಕಾರ್ಯವೂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಕಳವಾದ 13,628 ಪೈಕಿ 4,420 ಬೈಕ್ಗಳನ್ನು ಮಾತ್ರವೇ ಪೊಲೀಸರು ಪತ್ತೆ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ.
ಬೈಕ್ಗಳು ಕಳವಾಗದಂತೆ ಜಿಪಿಎಸ್ ಸೇರಿದಂತೆ ಇನ್ನಿತರೆ ಸುರಕ್ಷತಾ ಕ್ರಮಗಳನ್ನು ಮಾಲೀಕರು ಅಳವಡಿಸಿಕೊಳ್ಳಬೇಕು. ಇದರಿಂದ ಕಳವಾಗುವ ಸಾಧ್ಯತೆಗಳು ಕಡಿಮೆ. ಜತೆಗೆ, ಕಳವಾದರೆ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಲು ಸಹಕಾರಿಯಾಗಲಿದೆ.
ಮುನ್ನೆಚ್ಚರಿಕೆ ವಹಿಸದೆ ಬೈಕ್ಗಳನ್ನು ನಿಲ್ಲಿಸುವುದು, ಕೀ ಅದರಲ್ಲಿ ಬಿಟ್ಟು ಹೋಗುವುದು, ಸುಲಭವಾಗಿ ಮುರಿಯುವಂತಹ ಹ್ಯಾಂಡಲ್ ಲಾಕ್ ಬಳಸುವುದು, ಹಳೆಯ ಬೈಕ್ ಬಳಸುವುದು, ಕತ್ತಲು ಪ್ರದೇಶಗಳಲ್ಲಿ ಬೈಕ್ಗಳನ್ನು ನಿಲ್ಲಿಸುತ್ತಿರುವುದು ಬೈಕ್ ಕಳವು ಹೆಚ್ಚಾಗಲು ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರಕ್ಷತಾ ಕ್ರಮಗಳು
ಈ ಬೆನ್ನಲ್ಲೇ ಬೈಕ್ ಕಳ್ಳತನಕ್ಕೆ ಕಡಿವಾಣ ಹಾಕುವ ಸಲುವಾಗಿ ನಾಗರಿಕರು ಬೈಕ್ಗಳಿಗೆ ಸುರಕ್ಷಿತ ಕ್ರಮಗಳನ್ನು ಪಾಲಿಸುವಂತೆ ನಗರ ಪೊಲೀಸರು ಮನವಿ ಮಾಡಿದ್ದಾರೆ.
ಜತೆಗೆ, ಬೈಕ್ ಶೋ ರೂಂಗಳಿಗೂ ಪತ್ರ ಬರೆಯುತ್ತಿರುವ ಪೊಲೀಸರು, ಬೈಕ್ ಖರೀದಿಸುವವರಿಗೆ GPS ಅಳವಡಿಕೆ, ವೀಲ್ ಲಾಕಿಂಗ್ ಸಿಸ್ಟಮ್, (wheel locking system) ದೃಢ ಹ್ಯಾಂಡಲ್ ಲಾಕ್ ಅಳವಡಿಸಲು ಸಲಹೆ ನೀಡುವಂತೆಯೂ ಸೂಚಿಸಿದ್ದಾರೆ.
ಸಾರ್ವಜನಿಕರು ತಮ್ಮ ಬೈಕ್ಗಳನ್ನು CC TV ಇರುವ ಪ್ರದೇಶಗಳಲ್ಲಿ ನಿಲ್ಲಿಸಬೇಕು. ಬೈಕ್ ನಿಲ್ಲಿಸಿದಾಗ ಕೀ ಬಿಟ್ಟು ಹೋಗಬಾರದು. ನಕಲಿ ಕೀ ಅಥವಾ ಸಕ್ರ್ಯೂಟ್ ಬ್ರೇಕ್ ಮಾಡಿದಾಗ ಶಬ್ದ ಆಗುವಂತೆ ಸೈರನ್ ಅಳವಡಿಸಿಕೊಳ್ಳಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.