Bengaluru: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ (Biklu Shiva murder case) ಶಾಸಕ ಭೈರತಿ ಬಸವರಾಜ್ ಎರಡೂ ಬಾರಿ ಪೊಲೀಸರ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ, ಈ ಕೊಲೆ ಪ್ರಕರಣದ ಜೊತೆಗೆ ತಮ್ಮ ಸಂಬಂಧವೇ ಇಲ್ಲ ಎಂದು ಅವರು ಹೇಳಿದ್ದಾರೆ.
ಇದೀಗ, ಈ ಪ್ರಕರಣದಲ್ಲಿ ಭೀತಿಯಿಂದ ಮಲಿಯಾಳಿ ಅಜಿತ್ ಎಂಬ ಭೈರತಿ ಬಸವರಾಜ್ ನ ನಿಕಟ ಸಹಾಯಕನು ಪರಾರಿಯಾಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಲು ಹಲವು ಕಡೆ ಹುಡುಕಾಟ ನಡೆಸಿದರೂ, ಪತ್ತೆಯಾಗಿಲ್ಲ.
ಅಜಿತ್ ನ ಪರಿಚಯದ ಆರೋಪಿ ಕಿರಣ್ ನ ಮನೆ ಮತ್ತು ಕಚೇರಿಯಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ, ಅಜಿತ್ ಗೆ ಸೇರಿದ ಕೆಲವು ದಾಖಲೆಗಳು ಪತ್ತೆಯಾದವು. ಈ ದಾಖಲೆಗಳ ಕುರಿತು ವಿಚಾರಣೆಗೆ ಬರುವಂತೆ ಅಜಿತ್ ಗೆ ನೋಟಿಸ್ ನೀಡಲಾಗಿತ್ತು. ಆದರೆ ಅಜಿತ್, ನೋಟಿಸ್ ಸ್ವೀಕರಿಸಿ “ವಿಳಾಸವಿಲ್ಲ” ಎಂಬ ಲೆಟರ್ ಹೆಡ್ ನಲ್ಲಿ ಉತ್ತರ ನೀಡಿದ್ದ.
ಅಜಿತ್, “ನಾನು ಹೈಕೋರ್ಟ್ ವಕೀಲ. ನನ್ನ ವಿರುದ್ಧ ಯಾವ ಕಾನೂನು ಮಾನ್ಯತೆ ಇಲ್ಲದಂತೆ ತೊಂದರೆ ನೀಡುತ್ತಿದ್ದೀರಿ. ನನ್ನನ್ನು ಕೇಸ್ನಲ್ಲಿ ತೊಳಲಬೇಡಿ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಸ್ಪಷ್ಟ ಉತ್ತರ ನೀಡಿದ್ದಾರೆ.
ಪೊಲೀಸರು ಮತ್ತಷ್ಟು ಪ್ರಶ್ನೆ ಮಾಡಿದ ನಂತರ, ಅಜಿತ್ ತನ್ನ ಟಿ.ಸಿ ಪಾಳ್ಯದಲ್ಲಿರುವ ‘ಸಿನಿಮಾಸ್ ವಿ ಗ್ರೂಪ್’ ಕಚೇರಿ ಖಾಲಿ ಮಾಡಿ ಪರಾರಿಯಾಗಿದ್ದಾನೆ. ಇದೀಗ ಆ ಕಚೇರಿಯ ಬಳಿ ಪೊಲೀಸರು ಪೊಲೀಸ್ ಭದ್ರತೆ ಹೊಂದಿದ್ದಾರೆ.
ಬಿಕ್ಲು ಶಿವನ ಕೊಲೆಗೂ ಮುನ್ನ, ಜಗ್ಗ ಅಲಿಯಾಸ್ ಜಗದೀಶ್ ಎಂಬಾತ ಈ ಕೊಲೆಗೆ ಪೂರ್ವಯೋಜನೆ ಮಾಡಿಕೊಂಡಿದ್ದ. ರಾಮಮೂರ್ತಿ ನಗರದ ಬಾರ್ ನಲ್ಲಿ ಜುಲೈ 15ರ ರಾತ್ರಿ, ಎಂಟು ಜನ ಆರೋಪಿಗಳ ಜೊತೆ ಸ್ಕೆಚ್ ಹಾಕಿದ್ದ. ಈ ಯೋಜನೆಯ ಸಿಸಿ ಕ್ಯಾಮೆರಾ ದೃಶ್ಯಗಳು ಲಭ್ಯವಾಗಿವೆ.
ಶಿವನನ್ನು ರಾತ್ರಿ 8:05 ರಲ್ಲಿ ಕೊಂದ ಮೇಲೆ, ಜಗದೀಶ್ ಕೇವಲ 10 ನಿಮಿಷದೊಳಗೆ (8:15) ಹೆಣ್ಣೂರಿನ ಕ್ಯಾನೋಪಿ ಅಪಾರ್ಟ್ಮೆಂಟ್ ನಿಂದ ಆಡಿ ಕಾರಿನಲ್ಲಿ ಅತ್ತಿಬೆಲೆ ಮಾರ್ಗವಾಗಿ ಪರಾರಿಯಾದನು.







