ಭಾರತ ಮುಂಬರುವ AI ಶೃಂಗಸಭೆಯಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತನಾಡಿದ್ದೇನೆ. ಇದರಿಂದ ಜಾಗತಿಕ ದಕ್ಷಿಣದ ದೇಶಗಳಿಗೆ ಅನುಕೂಲವಾಗುತ್ತದೆ ಎಂದು ಬಿಲ್ ಗೇಟ್ಸ್ (Bill Gates) ಹೇಳಿದರು.
ಮೈಕ್ರೋಸಾಫ್ಟ್‌ನ ಮಾಜಿ CEO Bill Gates ಬುಧವಾರ ಭಾರತದ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ಶ್ಲಾಘಿಸಿದರು. ಭಾರತದ AI ನಾಯಕತ್ವವು ಜಗತ್ತಿನಾದ್ಯಂತ ನಾವೀನ್ಯತೆಗೆ ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು (DPI) ಜಾಗತಿಕ ಗಮನ ಸೆಳೆದಂತೆ, ಭಾರತದ AI ನಾವೀನ್ಯತೆ ವಿಶ್ವದ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ಶೃಂಗಸಭೆಯ ಮೂಲಕ ಜಾಗತಿಕ ದಕ್ಷಿಣದ ಸರ್ಕಾರಗಳು ಭಾಗವಹಿಸಿ, ಭಾರತದ ಪ್ರಗತಿಯಿಂದ ಪ್ರಯೋಜನ ಪಡೆಯಬೇಕಾಗಿದೆ ಎಂದು ಗೇಟ್ಸ್ ತಿಳಿಸಿದರು.
AI ತಂತ್ರಜ್ಞಾನ mRNA ಲಸಿಕೆಗಳು, ಕೃಷಿ ನಾವೀನ್ಯತೆ ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಟದಂತಹ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಯನ್ನು ವೇಗಗೊಳಿಸುತ್ತದೆ. ಡೇಟಾವನ್ನು ಸಂಗ್ರಹಿಸಿ ವಿಶ್ಲೇಷಿಸುವ ಮೂಲಕ, ಉತ್ತಮ ಆರೋಗ್ಯ ಮತ್ತು ಕೃಷಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬಹುದು.
ಭಾರತ ಕಡಿಮೆ ವೆಚ್ಚದ, ಉತ್ತಮ ಗುಣಮಟ್ಟದ ಲಸಿಕೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸೆರಮ್ ಇನ್ಸ್ಟಿಟ್ಯೂಟ್, ಭಾರತ್ ಬಯೋಟೆಕ್ ಮತ್ತು IRI ನಂತಹ ಸಂಸ್ಥೆಗಳ ಸಹಕಾರದಿಂದ ಜಾಗತಿಕ ಮಟ್ಟದಲ್ಲಿ ಲಸಿಕೆಗಳನ್ನು ತಲುಪಿಸಲಾಗುತ್ತಿದೆ.
ಭಾರತ ಆರೋಗ್ಯ, ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಪ್ರಗತಿ ಸಾಧಿಸುತ್ತಿದೆ. “ಭಾರತವು ದೊಡ್ಡ ಸವಾಲುಗಳು ಮತ್ತು ಮಹತ್ವಾಕಾಂಕ್ಷೆಗಳೊಂದಿಗೆ ಮುಂದೆ ಸಾಗುತ್ತಿದೆ. ಹೊಸ ಆವಿಷ್ಕಾರಗಳು ಇಲ್ಲಿ ಜೀವನವನ್ನು ಬದಲಾಯಿಸುತ್ತಿವೆ” ಎಂದು ಗೇಟ್ಸ್ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ.