Search
WhatsApp alerts

Home › Maharastra

Bitcoin Scam: ಸುಪ್ರಿಯಾ ಸುಳೆ ವಿರುದ್ಧ ಗಂಭೀರ ಆರೋಪ

administrator · Published

Supria sule

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ (Maharashtra assembly election) ನಡುವೆ, ಬಿಟ್‌ಕಾಯಿನ್ ಹಗರಣ (Bitcoin Scam) ಸಂಚಲನ ಮೂಡಿಸಿದೆ.

ಪುಣೆಯ ಮಾಜಿ IPS ಅಧಿಕಾರಿ ರವೀಂದ್ರನಾಥ ಪಾಟೀಲ್ ಅವರು NCP ನಾಯಕಿ ಮತ್ತು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಹಾಗೂ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ವಿರುದ್ಧ ಗಂಭೀರ ಆರೋಪ ಮಾಡಿದ್ದು, 2018 ರ ಕ್ರಿಪ್ಟೋಕರೆನ್ಸಿ ವಂಚನೆ (cryptocurrency scam) ಪ್ರಕರಣದಲ್ಲಿ ಅವರೊಬ್ಬರು ಭಾಗಿಯಾಗಿದ್ದಾರೆಂದು ಹೇಳಿದ್ದಾರೆ.

ಈ ಕುರಿತು BJP ಆಡಿಯೋ ಕ್ಲಿಪ್ ಬಿಡುಗಡೆ ಮಾಡಿ ಪಟೋಲೆ ಮತ್ತು ಸುಪ್ರಿಯಾ ಸುಳೆಗೆ ಆರೋಪ ಕೇಳಿಸಿತು. ಆದರೆ ಸುಪ್ರಿಯಾ ಸುಳೆ ಈ ಆಡಿಯೋ ಕ್ಲಿಪ್ ಅನ್ನು ತಳ್ಳಿ ಹಾಕಿದ್ದಾರೆ.

ಅವರು ಈ ಕುರಿತು ಪುಣೆಯ ಸೈಬರ್ ಸೆಲ್‌ಗೆ ದೂರು ನೀಡಿದ್ದು, ಅವಮಾನಕಾರಿ ಮಾಹಿತಿಗಳನ್ನು ಹರಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆಡಿಯೋ ಕ್ಲಿಪ್ ನಲ್ಲಿನ ಧ್ವನಿಯನ್ನು ಅಜಿತ್ ಪವಾರ್ ದೃಢಪಡಿಸಿದ್ದಾರೆ ಮತ್ತು ತನಿಖೆ ನಡೆಯುತ್ತಾ ಇದೆ ಎಂದು ಹೇಳಿದ್ದಾರೆ. NCP ಅಧ್ಯಕ್ಷ ಶರದ್ ಪವಾರ್ ಈ ಆರೋಪಗಳನ್ನು ರಾಜಕೀಯ ಎಂದು ಖಂಡಿಸಿದ್ದಾರೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page

Exit mobile version