ಮಹಾರಾಷ್ಟ್ರ (Maharashtra) ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ‘ಮಹಾಯುತಿ’ ಮೈತ್ರಿಕೂಟ (Mahayuti alliance) ಸರಕಾರ ರಚನೆಗೆ ಸಿದ್ಧತೆ ಮುಂದುವರಿಸುತ್ತಿದ್ದು, ದೇವೇಂದ್ರ ಫಡ್ನವಿಸ್ ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಫಡ್ನವಿಸ್ ಸಿಎಂ ಆದರೆ, ಶಿಂಧೆ ಬಣ ಮತ್ತು ಅಜಿತ್ ಪವಾರ್ ಬಣಕ್ಕೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪ್ರಮುಖ ಖಾತೆಗಳು ನೀಡುವ ಸಾಧ್ಯತೆ ಇದೆ.
ಬಿಜೆಪಿ 21 ಖಾತೆಗಳನ್ನು ತಕ್ಕೋಳ್ಳಬಹುದು. ಅಜಿತ್ ಪವಾರ್ ಬಣ 10 ಖಾತೆಗಳು, ಶಿವಸೇನೆ (ಶಿಂಧೆ ಬಣ) 12 ಖಾತೆಗಳನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ.
ಅಜಿತ್ ಪವಾರ್ ತಮ್ಮ ಬಣದ ಎಲ್ಲಾ ಶಾಸಕರಿಗೆ ಫಡ್ನವಿಸ್ ಅವರನ್ನು ಬೆಂಬಲಿಸಲು ಸೂಚಿಸಿದ್ದಾರೆ. ಎರಡು-ಮೂರು ದಿನಗಳಲ್ಲಿ ಪ್ರಮಾಣವಚನ ಸ್ವೀಕಾರ ನಡೆಯಬಹುದು ಎಂದು ಮೂಲಗಳಿಂದ ತಿಳಿಯುತ್ತದೆ.
ಆದರೆ, ಶಿಂಧೆ ಬಣದ ಶಿವಸೇನೆ ಸಂಸದ ನರೇಶ್ ಮಹಾಸ್ಕೆ, ಬಿಹಾರದ ಮಾದರಿಯನ್ನು ಉಲ್ಲೇಖಿಸಿ, ಶಿಂಧೆ ಅವರನ್ನೇ ಮುಖ್ಯಮಂತ್ರಿಯಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಹಾರದಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಕಡಿಮೆ ಸ್ಥಾನದಲ್ಲಿದ್ದರೂ ಸಿಎಂ ಆಗಿದ್ದರು. ಮಹಾರಾಷ್ಟ್ರದಲ್ಲೂ ಅದೇ ಮಾದರಿ ಅನುಸರಿಸಬೇಕು ಎಂದು ಅವರು ಹೇಳಿದ್ದಾರೆ. ಈ ಕಸರತ್ತು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ರಾಜಕೀಯದ ಭವಿಷ್ಯ ತೀರಲು ನಿರ್ಣಾಯಕವಾಗಬಹುದು.