ಹಾಗಲಕಾಯಿ (Bitter Gourd) ಕಹಿಯಾಗಿದ್ದರೂ ನಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಇದನ್ನು ತಿಂದರೆ ರಕ್ತದಲ್ಲಿನ ಸಕ್ಕರೆ (Sugar) ಹಾಗೂ ಕೊಲೆಸ್ಟ್ರಾಲ್ (Cholesterol) ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಇದರಲ್ಲಿ ವಿಟಮಿನ್ ಸಿ, ಫೈಬರ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೋಲೇಟ್, ಪ್ರೋಟೀನ್, ಕಾರ್ಬೋಹೈಡ್ರೇಟ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಇದ್ದು, ಇದು ಪಾಲಕ್ ಸೊಪ್ಪಿಗಿಂತ ಎರಡುಪಟ್ಟು ಹೆಚ್ಚು ಶಕ್ತಿದಾಯಕವಾಗಿದೆ. ಬಾಳೆಹಣ್ಣಿಗಿಂತಲೂ ಹೆಚ್ಚು ಪೊಟ್ಯಾಸಿಯಮ್ ಇದೆ.
ಆರೋಗ್ಯದ ಹಲವು ಗುಣಗಳಿದ್ದರೂ, ಇವುಗಳಿರುವವರಿಗೆ ಹಾಗಲಕಾಯಿ ಸೇವನೆ ತಪ್ಪಿದರೆ ಉತ್ತಮ.
ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು: ಹಾರ್ಮೋನು ಬದಲಾವಣೆಗಳು ನಡೆಯುವ ಈ ಸಮಯದಲ್ಲಿ ಹಾಗಲಕಾಯಿ ಹಾನಿಕಾರಕವಾಗಬಹುದು.
ಜೀರ್ಣ ಸಮಸ್ಯೆಗಳು ಇರುವವರು: ವಾಂತಿ, ಭೇದಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯುಳ್ಳವರಿಗೆ ಇದನ್ನು ತಿಂದರೆ ಸಮಸ್ಯೆ ಹೆಚ್ಚು ಗಂಭೀರವಾಗಬಹುದು.
ದೈಹಿಕವಾಗಿ ದುರ್ಬಲರಾದವರು: – ಉಪವಾಸ, ಶಸ್ತ್ರಚಿಕಿತ್ಸೆ ನಂತರ ಅಥವಾ ರಕ್ತ ಹಾನಿಯಾದವರು ಹಾಗಲಕಾಯಿ ತಿನ್ನಬಾರದು. ಇದು ರಕ್ತದಲ್ಲಿನ ಸಕ್ಕರೆ ಹಡಸು ಕಡಿಮೆ ಮಾಡಬಹುದು.
ಮಧುಮೇಹ ಅಥವಾ ಇನ್ಸುಲಿನ್ ಔಷಧಿ ತೆಗೆದುಕೊಳ್ಳುವವರು: ಸಕ್ಕರೆ ಮಟ್ಟವನ್ನು ಹೆಚ್ಚಾಗಿ ಇಳಿಸಬಹುದು. ಆದ್ದರಿಂದ ಮಾತ್ರೆಯೊಂದಿಗೆ ಜೋಡಿಸಿ ವೈದ್ಯರ ಸಲಹೆ ಅಗತ್ಯ.
ಔಷಧ ಸೇವನೆಯಲ್ಲಿರುವವರು: ಹಾಗಲಕಾಯಿ ಕೆಲವು ಔಷಧಿಗಳ ಚಯಾಪಚಯಕ್ಕೆ ಅಡ್ಡಿಯಾಗಬಹುದು. ಹೀಗಾಗಿ ಔಷಧ ಸೇವನೆಯ ಸಂದರ್ಭದಲ್ಲಿ ಮುಂಚಿತವಾಗಿ ವೈದ್ಯರ ಸಲಹೆ ಪಡೆಯುವುದು ಸೂಕ್ತ.
ಮೂತ್ರಪಿಂಡ ಮತ್ತು ಯಕೃತ್ತಿನ ತೊಂದರೆ ಇರುವವರು: ದೀರ್ಘಕಾಲ ಹಾಗಲಕಾಯಿ ಸೇವಿಸಿದರೆ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.
ಹಾಗಲಕಾಯಿ ಬಹುಪೋಷಕಾಂಶಗಳಿರುವ ತರಕಾರಿಯಾಗಿದ್ದರೂ, ಎಲ್ಲರಿಗೂ ಸರಿ ಇಲ್ಲ. ಹಾಗಾಗಿ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅಗತ್ಯವಿದ್ದರೆ ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸಬೇಕು.