back to top
26.3 C
Bengaluru
Friday, July 18, 2025
HomeHealthಮಧುಮೇಹಿಗಳಿಗೆ Bitter Gourd Juice: ಯಾವ ಸಮಯದಲ್ಲಿ ಕುಡಿಯಬೇಕು?

ಮಧುಮೇಹಿಗಳಿಗೆ Bitter Gourd Juice: ಯಾವ ಸಮಯದಲ್ಲಿ ಕುಡಿಯಬೇಕು?

- Advertisement -
- Advertisement -

ಮಧುಮೇಹ (ಡಯಾಬಿಟೀಸ್) ಇರುವವರು ಪ್ರತಿದಿನ ಹಾಗಲಕಾಯಿ ಜ್ಯೂಸ್ (Bitter gourd juice) ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ, ಈ ರಸವನ್ನು ಬೆಳಗ್ಗೆ ಅಥವಾ ಸಂಜೆ ಯಾವಾಗ ಕುಡಿಯುವುದು ಉತ್ತಮ ಎಂಬುದನ್ನು ನೋಡೋಣ.

ಹಾಗಲಕಾಯಿಯ ಪ್ರಯೋಜನಗಳು

  • ಹಾಗಲಕಾಯಿ ಜ್ಯೂಸ್ನಲ್ಲಿರುವ ಪೊಟ್ಯಾಸಿಯಮ್, ಕಬ್ಬಿಣ, ಫೈಬರ್, ವಿಟಮಿನ್ ಸಿ, ವಿಟಮಿನ್ ಎ ಸೇರಿದಂತೆ ಅನೇಕ ಪೋಷಕಾಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುತ್ತವೆ.
  • ಇದು ಚಯಾಪಚಯವನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
  • ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ ಮತ್ತು ಅಲರ್ಜಿಗಳನ್ನು ಕಡಿಮೆ ಮಾಡುತ್ತದೆ.
  • ತೂಕ ಇಳಿಕೆಗೆ ಸಹಾಯ ಮಾಡುತ್ತದೆ, ಏಕೆಂದರೆ ಕಡಿಮೆ ಕ್ಯಾಲೋರಿಯುಳ್ಳದ್ದು ಹಾಗೂ ಫೈಬರ್‌ ಸಮೃದ್ಧವಾಗಿದೆ.
  • ಹಾಗಲಕಾಯಿಯನ್ನು ಫ್ರೈ ಮಾಡದೇ, ರಸವಾಗಿ ಕುಡಿಯುವುದು ಪರಿಣಾಮಕಾರಿಯಾಗಿದೆ.
  • ಮಧುಮೇಹದ ನಿಯಂತ್ರಣಕ್ಕಾಗಿ ಪಾಲಿಪೆಪ್ಟೈಡ್-ಪಿ ಎಂಬ ಪ್ರೋಟೀನ್ ಇಲ್ಲಿದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಯಾವಾಗ ಕುಡಿಯಬೇಕು: ತಜ್ಞರು ಹೇಳುವಂತೆ, ಮಧುಮೇಹಿಗಳಿದ್ದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿಯುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಆರೋಗ್ಯವನ್ನು ಸುಧಾರಿಸಲು ಉತ್ತಮ ಮಾರ್ಗವಾಗಿದೆ.

ಸೂಚನೆ: ಯಾವುದೇ ಹೊಸ ಆಹಾರ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page