![BJP is back on the path of power in Delhi BJP is back on the path of power in Delhi](https://kannadatopnews.com/wp-content/uploads/2025/02/Photoshop_Online-news-copy-87.jpg)
Delhi: 27 ವರ್ಷಗಳ ಬಳಿಕ ದೆಹಲಿಯಲ್ಲಿ BJP ಮತ್ತೆ ಅಧಿಕಾರದ ಹಾದಿಯಲ್ಲಿ (BJP’s victory)ಬಂದಿದೆ. ದೀರ್ಘಕಾಲ ಆಡಳಿತ ನಡೆಸಿದ್ದ ಆಮ್ ಆದ್ಮಿ ಪಕ್ಷ (AAP) ಈ ಬಾರಿ ಭಾರಿ ಸೋಲು ಅನುಭವಿಸಿದೆ. ಬಿಜೆಪಿ, ಆಪ್ ನಾಯಕರು ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಸೋಲಿಸಿದ್ದು, ಸಿಎಂ ಅತಿಶಿ ಮಾತ್ರ ಗೆಲುವು ಸಾಧಿಸಿ ಪಕ್ಷದ ಗೌರವ ಉಳಿಸಿದ್ದಾರೆ.
ಇಲ್ಲಿಯ ತನಕಾದ ಮತ ಎಣಿಕೆಯ ಪ್ರಕಾರ, ಬಿಜೆಪಿ 70 ಸ್ಥಾನಗಳಲ್ಲಿ 45ರಲ್ಲಿ ಮುನ್ನಡೆ ಸಾಧಿಸಿದ್ದು, 2 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. 2020ರ ಚುನಾವಣೆಯಲ್ಲಿ ಕೇವಲ ಕೆಲವು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಭರ್ಜರಿ ಫಲಿತಾಂಶ ತಂದುಕೊಂಡು ಬಂದಿದೆ.
ಬೆಳಿಗ್ಗೆಯಿಂದ ದೆಹಲಿಯ 11 ಜಿಲ್ಲೆಗಳ 19 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. 70 ಸದಸ್ಯರ ವಿಧಾನಸಭೆಗೆ ಫೆಬ್ರವರಿ 5ರಂದು ನಡೆದ ಚುನಾವಣೆಯಲ್ಲಿ ಶೇ. 60.54 ಮತದಾನ ದಾಖಲಾಗಿದೆ.
ಎಎಪಿ ಈ ಬಾರಿ 21 ಸ್ಥಾನ ಕಳೆದುಕೊಂಡು ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆದ್ದಿದೆ. Congress ಮತ್ತೊಮ್ಮೆ ಶೂನ್ಯ ಸ್ಥಾನಕ್ಕೆ ತರುತ್ತಾ ಎಂಬ ಆತಂಕ ಎದುರಿಸುತ್ತಿದ್ದು, ನಿರಂತರ ಮೂರನೇ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸುತ್ತಿದೆ.
ಈ ಚುನಾವಣೆಯಲ್ಲಿ ದೆಹಲಿಯ ರಾಜಕೀಯ ಚಿತ್ರಣವೇ ಬದಲಾಗಿದೆ, ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲಿಟ್ಟಿದೆ.