Bengaluru: BMTC (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ತನ್ನ ಬಸ್ಸುಗಳ ಪೈಕಿ 148 ಹೊಸ ಟಾಟಾ ಎಲೆಕ್ಟ್ರಿಕ್ ಬಸ್‌ಗಳನ್ನು (electric buses) ಸೇರಿಸಿಕೊಂಡಿದೆ. ಶುಕ್ರವಾರ ಶಾಂತಿನಗರದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹಸಿರು ನಿಶಾನೆ ತೋರಿಸಿ ಈ ಬಸ್‌ಗಳನ್ನು ಉದ್ಘಾಟಿಸಿದರು. ಇಂದು (ಜುಲೈ 11) ರಿಂದ ಈ ಬಸ್‌ಗಳು ಸಾರ್ವಜನಿಕ ಸೇವೆಗೆ ಲಭ್ಯವಿದ್ದು, ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶವಿದೆ.ಈ ಬಸ್‌ಗಳು ಪ್ರತೀ ಕಿಲೋಮೀಟರ್ ಗೆ 41.1 ಪೈಸೆ ವೆಚ್ಚದಲ್ಲಿ ಗುತ್ತಿಗೆ ಆಧಾರದ ಮೇಲೆ ಸಂಚರಿಸಲಿವೆ.
30 ಮಾರ್ಗಗಳಲ್ಲಿ ಸಂಚಾರ: ಈ ಹೊಸ ಬಸ್‌ಗಳ ಸೇರ್ಪಡೆೊಂದಿಗೆ ಬಿಎಂಟಿಸಿಯ ಒಟ್ಟು ಬಸ್‌ಗಳ ಸಂಖ್ಯೆ 7,048 ಕ್ಕೆ ಏರಿಕೆಯಾಗಿದೆ. ಈ ಎಲೆಕ್ಟ್ರಿಕ್ ಬಸ್‌ಗಳು 12 ವರ್ಷಗಳ ಕಾಲ ನಗರದಲ್ಲಿ ಸಂಚರಿಸಲಿವೆ. ಚಾಲಕರು ಟಾಟಾ ಕಂಪನಿಯಿಂದ ನಿಯೋಜಿತರಾಗಿದ್ದು, ಕಂಡಕ್ಟರ್‌ಗಳನ್ನು ಬಿಎಂಟಿಸಿ ನೇಮಕ ಮಾಡಲಿದೆ. ಈ 148 ಬಸ್‌ಗಳು ನಗರದ 30 ವಿಭಿನ್ನ ಮಾರ್ಗಗಳಲ್ಲಿ ಸಂಚರಿಸಲಿವೆ.
ಟಾಟಾ ಎಲೆಕ್ಟ್ರಿಕ್ ಬಸ್‌ಗಳ ವೈಶಿಷ್ಟ್ಯತೆಗಳು
- ಪರಿಸರ ಸ್ನೇಹಿ, ಬಹುತೇಕ ಶೂನ್ಯ ಹೊಗೆಯುಸಿರು.
- ಬಸ್‌ಗಳು 12 ಮೀಟರ್ ಉದ್ದ ಮತ್ತು 400 ಮಿಮೀ ಎತ್ತರ ಹೊಂದಿರುತ್ತವೆ.
- ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ ದೂರ ಸಂಚರಿಸಬಲ್ಲವು.
- ಎಲ್ಲ ಬಸ್‌ಗಳು ಘಟಕ-04 (ಜಯನಗರ) ನಿಂದ ಸಂಚರಿಸಲಿವೆ.
- 35 ಆಸನಗಳ ಸಾಮರ್ಥ್ಯ, 1 ಗಾಲಿ ಕುರ್ಚಿಗೆ ಸೌಲಭ್ಯ.
- 3 ಒಳಭಾಗ ಕ್ಯಾಮೆರಾ ಮತ್ತು 1 ಹಿಂಬದಿ ಕ್ಯಾಮೆರಾ ಸುರಕ್ಷತೆಗಾಗಿ ಅಳವಡಿಸಲಾಗಿದೆ.
- 4 ಎಲ್‌ಇಡಿ ಬೋರ್ಡ್‌ಗಳು ಮತ್ತು ಧ್ವನಿ ಪ್ರಕಟಣೆ ವ್ಯವಸ್ಥೆ.
- ಮಹಿಳೆಯರ ಸುರಕ್ಷತೆಗೆ 10 ತುರ್ತು ಪ್ಯಾನಿಕ್ ಬಟನ್‌ಗಳು.
- ಅಗ್ನಿ ಪತ್ತೆ ಮತ್ತು ಎಚ್ಚರಿಕೆ ವ್ಯವಸ್ಥೆ (FDAS) ಅಳವಡಿಸಲಾಗಿದೆ.
- ಜಿಪಿಎಸ್ ಮೂಲಕ ವಾಹನ ಸ್ಥಳ ನಿಗಾವ್ಯವಸ್ಥೆ.
- ಹಿರಿಯರು, ವಿಕಲಾಂಗರು, ಗಾಲಿ ಕುರ್ಚಿಯಲ್ಲಿರುವವರು ಸುಲಭವಾಗಿ ಹತ್ತಲು ಬಸ್ ಎಡಭಾಗ ಬಾಗುವ ವ್ಯವಸ್ಥೆ.
- ನಿಲುಗಡೆ ಬೇಕಾದಾಗ ಬಟನ್ ಒತ್ತುವ ವ್ಯವಸ್ಥೆ.
- ಮುಂದಿನ ಮತ್ತು ಮಧ್ಯದ ಭಾಗದಲ್ಲಿ ಸ್ವಯಂಚಾಲಿತ ಬಾಗಿಲುಗಳು.
- ಈ ಬಸ್‌ಗಳು ನಗರದಲ್ಲಿ ಸ್ವಚ್ಛ ಮತ್ತು ಸುಸಜ್ಜಿತ ಸಾರಿಗೆ ವ್ಯವಸ್ಥೆಯತ್ತ ಒಂದು ಹೆಜ್ಜೆ.