Bengaluru: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ನೇ ಸಾಲಿನ ಬಜೆಟ್ ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಈ ಬಜೆಟ್‌ನ (Budget) ಮೂಲಕ ಮಧ್ಯಮ ವರ್ಗದವರು ಮತ್ತು ವೇತನದಾರರಿಗೆ ಸಿಹಿ ಸುದ್ದಿಯನ್ನು ಘೋಷಣೆ ಮಾಡಲಾಗಿದ್ದು, 12 ಲಕ್ಷ ರೂ.ವರೆಗೆ ಆದಾಯ ಹೊಂದಿದವರಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ.
ಹಿರಿಯ ನಾಗರಿಕರಿಗೆ 50 ಸಾವಿರ ರೂ.ದಿಂದ 1 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿಯನ್ನು ನೀಡಲಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಯಾವುದೇ ತೆರಿಗೆ ಪಾವತಿಸಬೇಕಾಗುವುದಿಲ್ಲ.
ತೆರಿಗೆ ವಿನಾಯ್ತಿ ವಿವರಗಳು
- 0-4 ಲಕ್ಷ ರೂ. ಆದಾಯ: 0%
- 4-8 ಲಕ್ಷ ರೂ. ಆದಾಯ: 5%
- 8-12 ಲಕ್ಷ ರೂ. ಆದಾಯ: 10%
- 12-16 ಲಕ್ಷ ರೂ. ಆದಾಯ: 15%
- 16-20 ಲಕ್ಷ ರೂ. ಆದಾಯ: 20%
- 20-24 ಲಕ್ಷ ರೂ. ಆದಾಯ: 25%
- 24 ಲಕ್ಷ ರೂ. ಮೇಲೆ ಆದಾಯ: 30%
ವಸ್ತುಗಳ ಬೆಲೆ ಇಳಿಕೆ
- ಸ್ವದೇಶಿ ಬಟ್ಟೆಗಳು
- ಎಲೆಕ್ಟ್ರಿಕ್ ಕಾರುಗಳು
- ಚರ್ಮದ ಉತ್ಪನ್ನಗಳು
- ಎಲ್‌ಇಡಿ ಟಿವಿಗಳು
- ಮೊಬೈಲ್ ಹಾಗೂ ಮೊಬೈಲ್ ಭಾಗಗಳು
- ಕ್ಯಾನ್ಸರ್ ಔಷಧಿಗಳು
ಈ ಬಜೆಟ್‌ನ ಮೂಲಕ ದೇಶದ ಜನತೆಯ ಬೇಡಿಕೆಯಂತೆ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡುವುದರಿಂದ ಮಧ್ಯಮ ವರ್ಗದವರು ಹರ್ಷಗೊಂಡಿದ್ದಾರೆ.