
Mumbai: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮದ ಘೋಷಣೆಯ ಪರಿಣಾಮವಾಗಿ ಮಂಗಳವಾರ ಭಾರತೀಯ ಷೇರು ಮಾರುಕಟ್ಟೆ (Stock Market) ಭರ್ಜರಿ ಏರಿಕೆ ಕಂಡಿತು.
- ಸೆನ್ಸೆಕ್ಸ್ 1,000 ಅಂಕಗಳಷ್ಟು ಏರಿಕೆಯಾಗಿ ಶೇಕಡಾ 1ರಷ್ಟು ಲಾಭ ಕಂಡಿತು.
- ನಿಫ್ಟಿ ಕೂಡ 208 ಅಂಕಗಳಷ್ಟು ಏರಿಕೆಯಾಗಿ 25,233 ಅಂಕಗಳಿಗೆ ತಲುಪಿತು.
- ಕದನ ವಿರಾಮದ ಕಾರಣದಿಂದ ಕಚ್ಚಾ ತೈಲದ ಬೆಲೆಯು ಶೇಕಡಾ 5ರಷ್ಟು ಕುಸಿದಿದೆ, ಇದು ಖರೀದಿಗೆ ಉತ್ತೇಜನ ನೀಡಿತು.
- ಮಾರುಕಟ್ಟೆಯ Midcap and Smalkup ಶೇರ್ಗಳೂ ಶೇಕಡಾ 1 ಕ್ಕಿಂತ ಹೆಚ್ಚು ಏರಿದವು.
- ವಹಿವಾಟು ಆರಂಭದ ಕೆಲವೇ ನಿಮಿಷಗಳಲ್ಲಿ ಹೂಡಿಕೆದಾರರು ₹5 ಲಕ್ಷ ಕೋಟಿ ಮೌಲ್ಯದ ಲಾಭ ಗಳಿಸಿದರು.
- ಮಧ್ಯಾಹ್ನದ ಹೊತ್ತಿಗೆ ಸೆನ್ಸೆಕ್ಸ್ 850 ಅಂಕಗಳಷ್ಟು ಏರಿ 82,746 ಅಂಕಗಳಿಗೆ ತಲುಪಿತು.
ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿದ ಕದನ ವಿರಾಮದ ಘೋಷಣೆಯು ಜಾಗತಿಕ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಗಳಲ್ಲಿ ಭರ್ಜರಿ ಚುರುಕು ಕಂಡುಬಂದಿದೆ.