Mumbai, Maharastra : ಟಾಟಾ ಸನ್ಸ್‌ನ (Tata Sons) ಅಧ್ಯಕ್ಷ ಗೌರವಾನ್ವಿತ ಮತ್ತು ಹೆಸರಾಂತ ಲೋಕೋಪಕಾರಿ ರತನ್ ಟಾಟಾ (Ratan Tata) ಅವರು ಅಕ್ಟೋಬರ್ 9 ರಂದು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಅವರನ್ನು ಗಂಭೀರ ಸ್ಥಿತಿಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ನಿಧನವು ರಾಷ್ಟ್ರವನ್ನು ಶೋಕದಲ್ಲಿ ಮುಳುಗಿಸಿದೆ, ಹಲವಾರು ರಾಜಕೀಯ ನಾಯಕರು ಮತ್ತು ಉದ್ಯಮದ ವ್ಯಕ್ತಿಗಳು ತೀವ್ರ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಹೇಳಿಕೆಯಲ್ಲಿ, “ಶ್ರೀ ರತನ್ ನೇವಲ್ ಟಾಟಾ ಅವರ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ, ಅವರ ಅಪಾರ ಕೊಡುಗೆಗಳು ಟಾಟಾ ಗ್ರೂಪ್ ಮಾತ್ರವಲ್ಲದೆ ನಮ್ಮ ರಾಷ್ಟ್ರದ ಪ್ರಗತಿಯನ್ನೂ ರೂಪಿಸಿವೆ” ಎಂದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶ್ರೀ ಟಾಟಾ ಅವರಿಗೆ ಗೌರವ ಸಲ್ಲಿಸಿದರು, ಅವರನ್ನು “ದೂರ ದೃಷ್ಠಿಯುಳ್ಳ ಉದ್ಯಮಿ, ನಾಯಕ, ಸಹಾನುಭೂತಿಯುಳ್ಳ ವ್ಯಕ್ತಿ” ಎಂದು ಬಣ್ಣಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರತನ್ ಟಾಟಾ ಅವರ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ಸಲ್ಲಿಸುವ ಮೂಲಕ ಟಾಟಾ ರವರ ಮಹತ್ವದ ಪರಂಪರೆಗೆ ಗೌರವ ನೀಡಲು ಆದೇಶಿಸಿದ್ದಾರೆ.