back to top
21.2 C
Bengaluru
Friday, November 15, 2024
HomeNewsBJP ರಾಜ್ಯಾಧ್ಯಕ್ಷ BY Vijayendra ರನ್ನು ಹೈಕಮಾಂಡ್ ವಜಾ ಮಾಡಬೇಕು

BJP ರಾಜ್ಯಾಧ್ಯಕ್ಷ BY Vijayendra ರನ್ನು ಹೈಕಮಾಂಡ್ ವಜಾ ಮಾಡಬೇಕು

- Advertisement -
- Advertisement -

Vijayapura: BJP ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (State President BY Vijayendra) ಹೈಕಮಾಂಡ್ ವಜಾ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (MLA Basangouda Patil Yatnal) ಹೇಳಿದ್ದಾರೆ.

ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ವಕ್ಫ್ (Waqf Law) ಕಾನೂನಿನ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಆದರೆ, ಇದರ ಬಗ್ಗೆ ಕಳಕಳಿ ಇರದ BJP ಬಿವೈ ವಿಜಯೇಂದ್ರ ಈವರೆಗೂ ಮಾತನಾಡಿಲ್ಲ.

ಈಗ ವಿಜಯಪುರ ವಕ್ಫ್ ಆಸ್ತಿ ಅಧ್ಯಯನಕ್ಕೆ ಸಮಿತಿ ರಚನೆ ಮಾಡಿದ್ದು, ಅದರಲ್ಲಿ ಈ ಭಾಗದ ಸಂಸದ ರಮೇಶ ಜಿಗಜಿಣಗಿ ಮತ್ತು ಬದುಕಿರುವ ಶಾಸಕನಾಗಿರುವ ನನ್ನನ್ನು ಸೇರಿಸಿಲ್ಲ.

ವಂಶಪಾರಂಪರ್ಯ ಬೆಳೆಸುವುದನ್ನು ಬಿಟ್ಟು ಇವರು ಬೇರೇನೂ ಮಾಡುವುದಿಲ್ಲ. ಇದನ್ನು ನಾವು ಒಪ್ಪುವುದಿಲ್ಲ. ರಾಷ್ಟ್ರೀಯ ನಾಯಕರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.

ತಕ್ಷಣ ವಿಜಯೇಂದ್ರ ಅವರನ್ನು ವಜಾ ಮಾಡಬೇಕು. ಇಂಥ ಅಧ್ಯಕ್ಷ ಕರ್ನಾಟಕಕ್ಕೆ ಬೇಕಾಗಿಲ್ಲ ಎಂದು ಹೇಳಿದರು.

ಈ ತಂಡದಲ್ಲಿ ಸ್ಥಳಿಯ ಶಾಸಕನಾದ ನನ್ನ ಮತ್ತು ಸಂಸದರಾದ ರಮೇಶ ಜಿಗಜಿಣಗಿ ಅವರ ಹೆಸರುಗಳಿಲ್ಲ. ಅದು ವಿಜಯೇಂದ್ರ ಟೀಮ್. ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ.

ಇದು ಕಾಟಾಚಾರಕ್ಕೆ ಮಾಡಿದ ಟೀಂ. ಹೀಗಾಗಿ ನಾನು ಮತ್ತು ಲೋಕಸಭಾ ಸದಸ್ಯರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ ಎಂದು ಹೇಳಿದರು.

ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಸಿಎಂ ಇದ್ದಾಗ ಜಮೀರ್ ಅಹ್ಮದ್ ಖಾನ್ ಅವರಿಗೆ 1000 ಕೋಟಿ ಅನುದಾನ ನೀಡಿದ್ದರು. ಇದನ್ನು ನಾನು ಪ್ರಸ್ತಾಪಿಸಿ ವಿರೋಧಿಸಿದ್ದಕ್ಕೆ ಅದನ್ನು ವಾಪಸ್ ಪಡೆದರು.

ಪೂಜ್ಯ ತಂದೆಯವರ ಕಿರಿಯ ಮಗ ಜಮೀರ್ ಗೆ ರೂ. 1000 ಕೋ. ಅನುದಾನ ನೀಡಲು ಏನಾದರೂ ತೆಗೆದುಕೊಂಡಿರಬೇಕಲ್ಲ? ವಿಜಯೇಂದ್ರೆ ಇಂಥ ವ್ಯವಹಾರಗಳನ್ನು ಬಿಡಬೇಕು.

ಇಲ್ಲಿ ನಾನು ಶಾಸಕ. ನಮ್ಮ ಲೋಕಸಭಾ ಸದಸ್ಯರಿದ್ದಾರೆ. ನಮ್ಮಿಬ್ಬರನ್ನ ಬಿಟ್ಟು ಸಮಿತಿ ಮಾಡಲಾಗಿದೆ. ಇದು ನಿಜವಾಗಿ ಹೋರಾಟ ಮಾಡುವವರನ್ನು ತುಳಿದಂತಾಗುತ್ತದೆ.

ವಿಜಯೇಂದ್ರನ ಕಾರ್ಯಕ್ರಮವೇ ನಮ್ಮನ್ನು ತುಳಿಯುವ ಕಾರ್ಯಕ್ರಮ. ಪೂಜ್ಯ ತಂದೆಯವರು ಅದನ್ನೇ ಮಾಡಿದರು. ಪೂಜ್ಯ ತಂದೆಯವರ ಮಗನೂ ಅದನ್ನೇ ಮಾಡುತ್ತಿದ್ದಾರೆ ಎಂದು ಶಾಸಕರು ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಅವರ ವಿರುದ್ಧ ಕಿಡಿ ಕಾರಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page