Bengaluru: ನಾನು ಹೋರಾಟದಿಂದ ಬಂದವನು. ಯಾವುದಕ್ಕೂ ಹೆದರಲ್ಲ. ರಾಜೀನಾಮೆಯೂ ನೀಡಲ್ಲ. ನಿಮ್ಮ ಷಡ್ಯಂತ್ರವನ್ನು ಸೋಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ BJP – JDSಗೆ ನೇರ ಎಚ್ಚರಿಕೆ ನೀಡಿದರು.
ಬಿಜೆಪಿಯವರು (BJP) ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ, ಕೇಸು ದಾಖಲಿಸಿ ಜೈಲಿಗೆ ಹಾಕಿದ ರೀತಿಯಲ್ಲಿಯೇ ನಮ್ಮ CM ವಿರುದ್ಧವೂ ಸಂಚು ರೂಪಿಸುತ್ತಿದ್ದಾರೆ, ಬಿಜೆಪಿ (BJP) ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಸಿಎಂ ರಾಜೀನಾಮೆಗೆ (resignation ) ಆಗ್ರಹಿಸುತ್ತಿರುವ ವಿಜಯೇಂದ್ರ ಮೊದಲು ರಾಜೀನಾಮೆ ನೀಡಬೇಕಾಗುತ್ತದೆ. ಅವರ ತಂದೆ ಮೇಲೆ ಪೋಕ್ಸೋ ಕೇಸ್ ಇದೆ. ಅವರು ರಾಜೀನಾಮೆ ಕೊಡಬೇಕು. ತನಿಖಾ ಸಂಸ್ಥೆಗಳು ಸಿಎಂ ಸಿದ್ದರಾಮಯ್ಯ ಹೆಸರು ಹೇಳುವಂತೆ ಒತ್ತಾಯ ಮಾಡಿಲ್ವಾ? ನಾವು ಎರಡು ನ್ಯಾಯಲಯಕ್ಕೆ (Court) ಹೋಗಲು ತಯಾರಿದ್ದೇವೆ. ಸುಪ್ರೀಂ ಕೋರ್ಟ್ (supreme court) ಮತ್ತು ಜನತಾ ನ್ಯಾಯಾಲಯಕ್ಕೆ ಹೋಗಲು ತಯಾರಿದ್ದೇವೆ ಎಂದು ಹೇಳಿದರು.
ಮತ್ತೋರ್ವ ಸಚಿವ ಕೆ.ಎಚ್.ಮುನಿಯಪ್ಪ (K H Muniyappa)ಮಾತನಾಡಿ, ಮುಡಾ (MUDA) ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪಾತ್ರವಿಲ್ಲ, ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ. ನಾವು ಕಾನೂನು ಹೋರಾಟ ನಡೆಸುತ್ತೇವೆ. ಸಿದ್ದರಾಮಯ್ಯ ಅವರ ವಿರುದ್ಧದ ಆರೋಪ ರಾಜಕೀಯ ಪ್ರೇರಿತವಾಗಿದ್ದು, ಇಡೀ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದರು.
ಡಿಸಿಎಂ (DCM) ಡಿ.ಕೆ.ಶಿವಕುಮಾರ್ (D K Shivakumar)ಹಾಗೂ ಸಿದ್ದರಾಮಯ್ಯ ಅವರು, ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದಾಗ ಯಾವ ದಲಿತ ಮುಖಂಡರೂ ಹಾಜರಿರಲಿಲ್ಲ. ಮುನಿಯಪ್ಪ ಮತ್ತು ಪ್ರಿಯಾಂಕ್ ದೆಹಲಿಯಲ್ಲಿದ್ದರೆ, ಡಾ ಪರಮೇಶ್ವರ ಅವರು ತಿರುವನಂತಪುರಂನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.