
ಅನಿತಾ ಆನಂದ್ ಕೆನಡಾದ (Canada) ಮುಂದಿನ ಪ್ರಧಾನಿ ಪೈಪೋಟಿ- ರೇಸ್ನಲ್ಲಿರುವ ಭಾರತದ ಮೂಲದ Anita Anand ಪ್ರಮುಖ ರಾಜಕೀಯ ನಾಯಕಿಯರಲ್ಲಿ ಒಬ್ಬರು. ಭಾರತೀಯ ಮೂಲದ ಈ ನಾಯಕಿ ಪ್ರಸ್ತುತ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಸಚಿವರಾಗಿದ್ದಾರೆ. 1967ರಲ್ಲಿ ನೋವಾ ಸ್ಕೋಟಿಯಾದಲ್ಲಿ ಜನಿಸಿದ ಅನಿತಾ, (Anita Anand) ಪಂಜಾಬ್ ಮೂಲದ ತಾಯಿ ಸರೋಜ ಮತ್ತು ತಮಿಳುನಾಡು ಮೂಲದ ತಂದೆ ಎಸ್.ವಿ. ಆನಂದ್ ಅವರ ಪುತ್ರಿ.
ಅನಿತಾ ಟೊರೊಂಟೊ ವಿಶ್ವವಿದ್ಯಾಲಯದಲ್ಲಿ ಕಾನೂನು ಪ್ರಾಧ್ಯಾಪಕರಾಗಿದ್ದರು. ಅವರು 2019ರಲ್ಲಿ ಲಿಬರಲ್ ಪಕ್ಷದಿಂದ ಚುನಾಯಿತರಾಗಿ, ಸಾರ್ವಜನಿಕ ಸೇವೆಗಳ ಸಚಿವರಾಗಿ ಪ್ರಾರಂಭಿಸಿದರು. ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಲಸಿಕೆ ವಿತರಣೆ ಯೋಜನೆಯಲ್ಲಿ ಮಹತ್ವದ ಪಾತ್ರವಹಿಸಿದರು. ನಂತರ, ರಕ್ಷಣಾ ಸಚಿವೆಯಾಗಿ ಉಕ್ರೇನ್ ಗೆ ಸಹಾಯ ಮಾಡುವಲ್ಲಿ ನೇತೃತ್ವ ವಹಿಸಿದರು.
ಅನಿತಾ ಆನಂದ್ ಕ್ವೀನ್ಸ್ ವಿಶ್ವವಿದ್ಯಾನಿಲಯದಿಂದ ರಾಜಕೀಯ ಅಧ್ಯಯನದಲ್ಲಿ ಪದವಿ, ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಮತ್ತು ಡಾಲ್ಹೌಸಿ, ಟೊರೊಂಟೊ ವಿಶ್ವವಿದ್ಯಾನಿಲಯಗಳಿಂದ ಲಾ ಡಿಗ್ರಿಗಳನ್ನು ಪಡೆದಿದ್ದಾರೆ.
ಅನಿತಾ ಅವರ ಸಹೋದರಿಯರಾದ ಗೀತಾ ಮತ್ತು ಸೋನಿಯಾ ತಮ್ಮ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳಲ್ಲಿದ್ದಾರೆ. ಈ ಹಿನ್ನೆಲೆ ಅವರ ಕುಟುಂಬದ ಶೈಕ್ಷಣಿಕ ಮತ್ತು ವೃತ್ತಿ ಸಾಧನೆಗಳನ್ನು ತೋರುತ್ತದೆ.
ಜಸ್ಟಿನ್ ಟ್ರುಡೊ ರಾಜೀನಾಮೆ ಘೋಷಿಸಿದ ನಂತರ, ಕೆನಡಾದ ಮುಂದಿನ ಪ್ರಧಾನಿಯ ಪೈಪೋಟಿ ತೀವ್ರಗೊಂಡಿದೆ. ಭಾರತೀಯ ಮೂಲದ ಅನಿತಾ ಆನಂದ್ ಮತ್ತು ಜಾರ್ಜ್ ಚಹಾಲ್ ಈ ರೇಸ್ ನಲ್ಲಿ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಅನಿತಾ ಅವರ ಪರಿಣಾಮಕಾರಿ ಆಡಳಿತ ಮತ್ತು ಸಾರ್ವಜನಿಕ ಸೇವೆಯ ದಾಖಲೆಗಳಿಂದಾಗಿ, ಅವರು ಪ್ರಮುಖ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ಅನಿತಾ ಅಥವಾ ಭಾರತೀಯ ಮೂಲದ ಯಾವ ನಾಯಕನಾದರೂ ಕೆನಡಾದ ಪ್ರಧಾನಿಯಾಗುವುದು ಭಾರತ-ಕೆನಡಾ ಸಂಬಂಧಗಳಿಗೆ ಹೊಸ ದಾರಿಯನ್ನು ತೆರೆಯಬಹುದು.