
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Prime Minister Justin Trudeau) ಶೀಘ್ರದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಬಹುದಾಗಿದೆ ಎಂಬ ಮಾಹಿತಿ ಎಲ್ಲೆಡೆ ಹರಡುತ್ತಿದೆ. ದಿ ಗ್ಲೋಬ್ ಮತ್ತು ಮೇಲ್ ವರದಿ ಪ್ರಕಾರ, ಬರುವ ಬುಧವಾರ ನಡೆಯಲಿರುವ ರಾಷ್ಟ್ರೀಯ ಕಾಕಸ್ ಸಭೆಗೆ ಮುಂಚೆ, ಅವರು ಲಿಬರಲ್ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ ನೀಡಬಹುದು.
ಟ್ರುಡೊ ತಮ್ಮ ಲಿಬರಲ್ ಪಕ್ಷದ ಒಳಗಿನ ಬಂಡಾಯವನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ರಾಷ್ಟ್ರೀಯ ಕಾಕಸ್ ಸಭೆಯಲ್ಲಿ, ಅವರು ಬಲವಾದ ವಿರೋಧವನ್ನು ಎದುರಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಟ್ರುಡೊ ರಾಜೀನಾಮೆ ನೀಡಿದ ನಂತರ, ಅವರು ಹಂಗಾಮಿ ಪ್ರಧಾನಿಯಾಗಿರುವರಾ? ಎಂಬುದು ಇನ್ನೂ ಸ್ಪಷ್ಟವಿಲ್ಲ. ಹೊಸ ನಾಯಕನ ಆಯ್ಕೆಯವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಬಹುದು.
ಜಸ್ಟಿನ್ ಟ್ರುಡೊ 2015ರಲ್ಲಿ ಪ್ರಚಂಡ ವಿಜಯದಿಂದ ಪ್ರಧಾನಿ ಆದರು. 2019 ಮತ್ತು 2021ರ ಚುನಾವಣೆಯಲ್ಲೂ ಲಿಬರಲ್ ಪಕ್ಷಕ್ಕೆ ಗೆಲುವು ತಂದುಕೊಟ್ಟರು. ಆದರೆ ಈಗ ಲಿಬರಲ್ ಪಕ್ಷದಲ್ಲಿ ಸೋಲಿನ ಭೀತಿ ಆವರಿಸಿದೆ. ಸಮೀಕ್ಷೆಗಳ ಪ್ರಕಾರ, ಟ್ರುಡೊ ತಮ್ಮ ಪ್ರಮುಖ ವಿರೋಧ ಪಕ್ಷವಾದ ಕನ್ಸರ್ವೇಟಿವ್ ಪಕ್ಷದ ಪಿಯರೆ ಪೊಯಿಲಿವ್ರೆಗಿಂತ 20 ಪಾಯಿಂಟ್ ಹಿನ್ನಡೆಯಲ್ಲಿದ್ದಾರೆ.
ಕೆಲವು ತಿಂಗಳುಗಳ ಹಿಂದೆ, ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್ಡಿಪಿ) ತನ್ನ ಬೆಂಬಲವನ್ನು ಹಿಂಪಡೆಯಿತು, ಇದರಿಂದ ಸರ್ಕಾರ ಅಲ್ಪಮತಕ್ಕೆ ಇಳಿಯಿತು. ಅಕ್ಟೋಬರ್ 1ರಂದು, ಲಿಬರಲ್ ಪಕ್ಷವು ಇನ್ನೊಂದು ಪಕ್ಷದ ಬೆಂಬಲದಿಂದ ಬದುಕಿ ಬಂತು.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ, ಟ್ರುಡೊ ಮೇಲೆ ಹೆಚ್ಚಿನ ಒತ್ತಡ ಹೆಚ್ಚಾಯಿತು. ಟ್ರುಡೊಗೆ ಕ್ಷಣಗಣನೆ ಆರಂಭವಾಗಿದೆ ಎಂಬ ಅಭಿಪ್ರಾಯ ಎಲಾನ್ ಮಸ್ಕ್ ಸಹ ವ್ಯಕ್ತಪಡಿಸಿದ್ದರು.
ಪ್ರಸ್ತುತ, ಲಿಬರಲ್ ಪಕ್ಷವು ಹೌಸ್ ಆಫ್ ಕಾಮನ್ಸ್ 153 ಸ್ಥಾನಗಳನ್ನು ಹೊಂದಿದ್ದು, 170 ಬಹುಮತದಿಂದ ಹೀನಾಯವಾಗಿ ಹಿಂದುಳಿಯುತ್ತಿದೆ. ಈ ರಾಜಕಾರಣ, ಪಕ್ಷದ ಭವಿಷ್ಯ ಅತಂತ್ರವಾಗಿದೆ.
ಜಸ್ಟಿನ್ ಟ್ರುಡೊ ತನ್ನ ಪಕ್ಷದೊಳಗಿನ ಅಡಚಣೆ, ವಿರೋಧ ಪಕ್ಷದ ತೀವ್ರ ಬಲ ಮತ್ತು ಜನಮತದ ಹಿನ್ನಡೆಯು ಇವರ ರಾಜೀನಾಮೆಗೆ ಕಾರಣವಾಗಬಹುದು ಎಂಬ ಆತಂಕ ಕಾನಡಾದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.