Bengaluru : Covid-19 ಕಾರಣದಿಂದ ಚಾಮರಾಜಪೇಟೆಯ ಶೃಂಗೇರಿ ಶಂಕರಮಠದಲ್ಲಿ (Sri Sringeri Shankara Mutt, Chamrajpet) ಸದ್ಗುರು ತ್ಯಾಗಬ್ರಹ್ಮ ಆರಾಧನಾ (Tyagaraja Aradhana) ಕೈಂಕರ್ಯ ಟ್ರಸ್ಟ್ ವತಿಯಿಂದ ಜನವರಿ 16 ರಿಂದ ಜನವರಿ 22 ರವರೆಗೆ ನಿಗದಿಯಾಗಿದ್ದ ‘175 ನೇ ವರ್ಷದ ತ್ಯಾಗರಾಜರ ಆರಾಧನಾ ಮಹೋತ್ಸವ ಹಾಗೂ ಸಂಗೀತೋತ್ಸವ’ವನ್ನು ರದ್ದುಗೊಳಿಸಲಾಗಿದೆ.
‘ಆರಾಧನಾ ಮಹೋತ್ಸವ ಹಾಗೂ ಸಂಗೀತೋತ್ಸವಕ್ಕೆ ಎಲ್ಲ ಸಿದ್ಧತೆ ನಡೆದಿದ್ದರು ಸರ್ಕಾರ ಸೂಚಿಸಿರುವ ನಿರ್ಬಂಧಗಳಿಂದಾಗಿ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ’ ಎಂದು ಸದ್ಗುರು ತ್ಯಾಗಬ್ರಹ್ಮ ಆರಾಧನಾ ಕೈಂಕರ್ಯ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ರಾಧಾಕೃಷ್ಣ ಜಿ.ಶೇಷಪ್ಪ ಹೇಳಿದ್ದಾರೆ.