
ಸೆಪ್ಟೆಂಬರ್ 9ರಿಂದ UAE ನಲ್ಲಿ ಆರಂಭವಾಗುವ ಏಷ್ಯಾಕಪ್ ಟಿ20 ಟೂರ್ನಿಗಾಗಿ ಭಾರತ ತಂಡವನ್ನು (Team India) ಘೋಷಿಸಲಾಗಿದೆ. 15 ಸದಸ್ಯರ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕನಾಗಿದ್ದು, ಶುಭ್ಮನ್ ಗಿಲ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ವಿಕೆಟ್ ಕೀಪರ್‌ಗಳಾಗಿ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ತಂಡದಲ್ಲಿದ್ದಾರೆ.
ಕಳೆದ ಬಾರಿ ಟೀಮ್ ಇಂಡಿಯಾ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಏಷ್ಯಾಕಪ್ ಆಡಿತ್ತು. ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ಇದ್ದರು. ಆದರೆ, ಒಂದೇ ವರ್ಷದಲ್ಲಿ ಬದಲಾವಣೆ ಸಂಭವಿಸಿ ಇದೀಗ ನಾಯಕನಾಗಿ ಸೂರ್ಯಕುಮಾರ್ ಯಾದವ್ ಹಾಗೂ ಉಪನಾಯಕನಾಗಿ ಶುಭ್ಮನ್ ಗಿಲ್ ಕಾಣಿಸಿಕೊಂಡಿದ್ದಾರೆ.
- 2024 ರ ನಾಯಕತ್ವ
- ಟೆಸ್ಟ್ ತಂಡ → ರೋಹಿತ್ ಶರ್ಮಾ (ಕ್ಯಾಪ್ಟನ್), ಜಸ್ಪ್ರೀತ್ ಬುಮ್ರಾ (ವೈಸ್ ಕ್ಯಾಪ್ಟನ್)
- ಏಕದಿನ & ಟಿ20 → ರೋಹಿತ್ ಶರ್ಮಾ (ಕ್ಯಾಪ್ಟನ್), ಹಾರ್ದಿಕ್ ಪಾಂಡ್ಯ (ವೈಸ್ ಕ್ಯಾಪ್ಟನ್)
- 2025 ರ ನಾಯಕತ್ವ
- ಟೆಸ್ಟ್ ತಂಡ → ಶುಭ್ಮನ್ ಗಿಲ್ (ಕ್ಯಾಪ್ಟನ್), ರಿಷಭ್ ಪಂತ್ (ವೈಸ್ ಕ್ಯಾಪ್ಟನ್)
- ಏಕದಿನ → ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್ಮನ್ ಗಿಲ್ (ವೈಸ್ ಕ್ಯಾಪ್ಟನ್)
- ಟಿ20 → ಸೂರ್ಯಕುಮಾರ್ ಯಾದವ್ (ಕ್ಯಾಪ್ಟನ್), ಶುಭ್ಮನ್ ಗಿಲ್ (ವೈಸ್ ಕ್ಯಾಪ್ಟನ್)
ಮೂರು ಸ್ವರೂಪಗಳಲ್ಲೂ ಉಪನಾಯಕನಾಗಿ ಕಾಣಿಸಿಕೊಂಡಿರುವುದರಿಂದ ಮುಂಬರುವ ಟಿ20 ವಿಶ್ವಕಪ್ ನಂತರ ಶುಭ್ಮನ್ ಗಿಲ್ ತಂಡದ ನಾಯಕತ್ವ ವಹಿಸುವ ಸಾಧ್ಯತೆ ಹೆಚ್ಚು.
ಏಷ್ಯಾಕಪ್ 2025 ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.