back to top
20.8 C
Bengaluru
Sunday, August 31, 2025
HomeKarnatakaKolarಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ

ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ

- Advertisement -
- Advertisement -

KGF (Kolar Gold Fields), Kolar : ಬೇತಮಂಗಲ (Cheemangala) ಹೋಬಳಿಯ ಹುಲ್ಕೂರು ಗ್ರಾಪಂ ವ್ಯಾಪ್ತಿಯ ಕವರಗಾನಹಳ್ಳಿ ಗ್ರಾಮಕ್ಕೆ ಮುಳಬಾಗಿಲು ಮುಖ್ಯ ರಸ್ತೆ (Mulbagal Main Road) ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯ (Link Road) ₹25 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಎಂ.ರೂಪಕಲಾ ಶಶಿಧರ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತಾನಾಡಿದ ಶಾಸಕಿ “ಗ್ರಾಮೀಣ ಭಾಗದಲ್ಲಿ ಸುಮಾರು ವರ್ಷಗಳಿಂದ ಅನೇಕ ರಸ್ತೆಗಳು ಅಭಿವೃದ್ಧಿಯಾಗದೆ ಇರುವುದು ಬೇಸರ ತಂದಿತ್ತು ಹಾಗಾಗಿ ₹6 ಕೋಟಿ ಅನುದಾನದಲ್ಲಿ ಗ್ರಾಮಾಂತರ ಭಾಗದ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುತ್ತಿದ್ದೆ. ಮಳೆ ಬಂದಾಗ ಈ ರಸ್ತೆಗಳಲ್ಲಿ ವಾಹನ ಸಂಚಾರ ಕಷ್ಟಕರವಾಗಿತ್ತು ಆದ್ದರಿಂದ ₹25 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿಯನ್ನು ಮಾಡಲಾಗುತ್ತಿದೆ” ಎಂದು ಹೇಳಿದರು.

ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಬಾಬು ಅವರಿಗೆ ಶಾಸಕಿ ರೂಪಕಲಾ ಶಶಿಧರ್ ಗುಣಮಟ್ಟದ ರೀತಿಯಲ್ಲಿ ರಸ್ತೆಯ ಕಾಮಗಾರಿ ಮಾಡಬೇಕು ಎಂದು ಸೂಚಿಸಿದರು.

ಎಪಿಎಂಸಿ ಅಧ್ಯಕ್ಷ ವಿಜಯರಾಘುವ ರೆಡ್ಡಿ, ನಿರ್ದೇಶಕ ರಾಮಚಂದ್ರ, ತಾಪಂ ಮಾಜಿ ಅಧ್ಯಕ್ಷ ಶಂಕರಪ್ಪ, ಗ್ರಾಪಂ ಅಧ್ಯಕ್ಷ ಮುನಿವೆಂಕಟಮ್ಮ, ಉಪಾಧ್ಯಕ್ಷ ಸೋಮಶೇಖರ್ ರೆಡ್ಡಿ, ಎಸ್‌.ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್, ಮುಖಂಡರಾದ ಪದ್ಮನಾಭ ರೆಡ್ಡಿ, ಕೃಷ್ಣೇಗೌಡ, ರಾಜಣ್ಣ, ನರಸಿಂಹ ಗೌಡ, ಜಯರಾಮರೆಡ್ಡಿ, ನಲ್ಲೂರು ಶಂಕರ್, ಹಂಗಳ ಶಿವಣ್ಣ, ಒಬಿಸಿ ಮುನಿಸ್ವಾಮಿ, ಸುರೇಂದ್ರ ಗೌಡ, ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page