New Delhi : ಭಾರತದ 50 ನೇ ಮುಖ್ಯ ನ್ಯಾಯಮೂರ್ತಿಯಾಗಿ (Chief Justice of India – CJI) ಧನಂಜಯ ವೈ. ಚಂದ್ರಚೂಡ್ (Dhananjaya Y. Chandrachud) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಜಸ್ಟೀಸ್ ಡಿವೈ ಚಂದ್ರಚೂಡ್ (Justice DY Chandrachud) ಅವರಿಗೆ ಪ್ರಮಾಣ ವಚನ ಬೋಧಿಸಿದರು. ನ್ಯಾ. ಡಿವೈ ಚಂದ್ರಚೂಡ್ ಅವರ ತಂದೆ ದಿವಂಗತ ನ್ಯಾ. ವೈವಿ ಚಂದ್ರಕೂಡ ಕೂಡ ಭಾರತದ ಸಿಜೆಐ ಆಗಿ ಸೇವೆ ಸಲ್ಲಿಸಿದ್ದಾರೆ.
74 ದಿನಗಳ ಅಲ್ಪಾವಧಿಗೆ ಉನ್ನತ ಹುದ್ದೆಯಲ್ಲಿದ್ದ ನ್ಯಾ. ಉದಯ್ ಉಮೇಶ್ ಲಲಿತ್ (Justice Uday Umesh Lalit) ಅವರ ಉತ್ತರಾಧಿಕಾರಿಯಾಗಿ ನ್ಯಾ. ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಿದರು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಮುಂದಿನ ಎರಡು ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ನ (Supreme Court of India) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.