
Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ನಡೆಯುತ್ತಿದ್ದ ಬಂಡಿ ಮಹಾಕಾಳಮ್ಮ ಮತ್ತು ಅಣ್ಣಮ್ಮ ದೇವಿ ಜಾತ್ರೆ ಮಹೋತ್ಸವಕ್ಕೆ ಬುಧವಾರ ತೆರೆ ಬಿದ್ದಿದೆ. ಜಾತ್ರಾ ಮಹೋತ್ಸವದ (Jathre) ಅಂಗವಾಗಿ ಎಂ.ಜಿ ರಸ್ತೆ, ಗಂಗಮ್ಮನ ಗುಡಿ ರಸ್ತೆ ಹಾಗೂ ಈ ರಸ್ತೆಗಳಿಗೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು.
ಎಂ.ಜಿ. ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಅಣ್ಣಮ್ಮ ದೇವಿ ಮೂರ್ತಿಗೆ ಭಕ್ತರು ನಮಿಸಿ ಮಹಿಳೆಯರು ತಂಬಿಟ್ಟಿನ ಆರತಿ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬುಧವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಅಣ್ಣಮ್ಮ ದೇವಿಯ ಮೆರವಣಿಗೆ ನಡೆಯಿತು.
ಕುರುಬರ ಪೇಟೆ, ಎಲೆಪೇಟೆ ಮತ್ತಿತರ ರಸ್ತೆಗಳಲ್ಲಿ ಬಂಡಿಮಹಾಕಾಳಮ್ಮ ದೇವಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಲಾಯಿತು.
For Daily Updates WhatsApp ‘HI’ to 7406303366
The post ಜಾತ್ರೆ ಮಹೋತ್ಸವಕ್ಕೆ ತೆರೆ appeared first on Chikkaballapur | Chikballapur | Chikkaballapura | ಚಿಕ್ಕಬಳ್ಳಾಪುರ ಸುದ್ದಿ.