
Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 44ರ (NH44) ಹಾರೋಬಂಡೆ ಮತ್ತು ಮರಸನಹಳ್ಳಿ ನಡುವೆ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿ ಅಪಘಾತ (Accident) ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಶಿಡ್ಲಘಟ್ಟ ತಾಲ್ಲೂಕಿನ ಮಿತ್ತನಹಳ್ಳಿಯ ನಾಗರಾಜ್ (42) ಮೃತಪಟ್ಟಿದ್ದಾರೆ (Death) .
ಅಪಘಾತವಾದಾಗ ಒಂದು ಬೈಕ್ ಮತ್ತು ಸವಾರ ರಸ್ತೆಯ ಒಂದು ಬದಿಗೆ ಬಿದ್ದರೆ ಮತ್ತೊಂದು ಬೈಕ್ ಉಜ್ಜಿಕೊಂಡು ಹೋಗಿ ನೇರವಾಗಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸಿಮೆಂಟ್ ಲಾರಿಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದು ಲಾರಿ ಪೂರ್ಣವಾಗಿ ಸುಟ್ಟು ಹೋಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಮುಂದಾದರು. ಆದರೂ ಲಾರಿ ಪೂರ್ಣವಾಗಿ ಸುಟ್ಟಿತು.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಡಿವೈಎಸ್‌ಪಿ ಶಿವಕುಮಾರ್, ಸರ್ಕಲ್ ಇನ್‌ಸ್ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur
The post ಅಪಘಾತ : ವ್ಯಕ್ತಿ ಸಾವು appeared first on Chikkaballapur.