Home Karnataka Chikkaballapura ದೇಗುಲದಲ್ಲಿ ಭಕ್ತನ ಜೇಬಿನಿಂದ ಹಣ ಕಳವು – ಆರೋಪಿ ಬಂಧನ

ದೇಗುಲದಲ್ಲಿ ಭಕ್ತನ ಜೇಬಿನಿಂದ ಹಣ ಕಳವು – ಆರೋಪಿ ಬಂಧನ

Chikkaballapur : ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಶನಿಮಹಾದೇವ ದೇಗುಲದಲ್ಲಿ ಭಕ್ತನೊಬ್ಬನ ಪ್ಯಾಂಟ್ ಜೇಬಿನಲ್ಲಿದ್ದ ಹಣ ಮಾಡಿದ ಪ್ರಕರಣದಲ್ಲಿ ಪೊಲೀಸರು ಒಡಿಶಾ ಮೂಲದ ಯುವಕನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಒಡಿಶಾದ ದಾಸ್ ಓಂ (23) ಎಂದು ಗುರುತಿಸಲಾಗಿದೆ. ತಾಲ್ಲೂಕಿನ ದಿಬ್ಬೂರು ಗ್ರಾಮದ ಡಿ.ಕೆ. ಮುನಿರಾಜು ಶನಿಮಹಾತ್ಮ ದೇಗುಲಕ್ಕೆ ದರ್ಶನಕ್ಕಾಗಿ ಬಂದಾಗ ಹೆಚ್ಚಿನ ಜನಸಂದಣಿಯ ಮಧ್ಯೆ ಅವರ ಜೇಬಿನಲ್ಲಿದ್ದ ಹಣ ಕಳವಾಗಿತ್ತು. ಈ ಬಗ್ಗೆ ನಗರ ಠಾಣೆಗೆ ಅವರು ದೂರು ಸಲ್ಲಿಸಿದ್ದರು.

ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಅವರಿಂದ ₹5 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.

For Daily Updates WhatsApp ‘HI’ to 7406303366

The post ದೇಗುಲದಲ್ಲಿ ಭಕ್ತನ ಜೇಬಿನಿಂದ ಹಣ ಕಳವು – ಆರೋಪಿ ಬಂಧನ appeared first on Chikkaballapur | Chikballapur | Chikkaballapura Latest Breaking New Stories | ಚಿಕ್ಕಬಳ್ಳಾಪುರ ಸುದ್ದಿ.

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version