Home Karnataka Chikkamagaluru Chikmagalur : ಬೊಮ್ಮಲಾಪುರ ತ್ರಿಪುರಾಂತಕಿ ಅಮ್ಮನವರ ರಥೋತ್ಸವ

Chikmagalur : ಬೊಮ್ಮಲಾಪುರ ತ್ರಿಪುರಾಂತಕಿ ಅಮ್ಮನವರ ರಥೋತ್ಸವ

Chikmagalur Bommalapur Tripurantaki Amma Rathotsava

Chikkamagaluru, Chikmagalur : ಕೊಪ್ಪ (koppa) ತಾಲ್ಲೂಕಿನ ಬೊಮ್ಮಲಾಪುರ ತ್ರಿಪುರಾಂತಕಿ ಅಮ್ಮನವರ ರಥೋತ್ಸವ (Bommalapur Tripurantaki Amma Rathotsava) ಮಂಗಳವಾರ ಸಂಭ್ರಮದಿಂದ ನೆರೆವೇರಿತು. ಬೆಳಿಗ್ಗೆಯಿಂದಲೇ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ನಡೆಸಲಾಯಿತು.

ರಥೋತ್ಸವ ಅಂಗವಾಗಿ ನಡೆದ ಚೆಂಡೆ ವಾದನ, ಬ್ಯಾಂಡ್ ಸೆಟ್, ಕೀಲು ಕುದುರೆ ಮತ್ತು ಗೊಂಬೆ ಕುಣಿತ ಆಕರ್ಷಣೀಯವಾಗಿತ್ತು. ಜಾತ್ರೆ ಬಯಲಿನಲ್ಲಿ ನೂರಾರು ಅಂಗಡಿ ಮುಂಗಟ್ಟುಗಳನ್ನು ತೆರೆಯಲಾಗಿತ್ತು. ತಾಲ್ಲೂಕಿನ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ದವಸ ಧಾನ್ಯಗಳನ್ನು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ದೇವಸ್ಥಾನ ಆಡಳಿತ ಸಮಿತಿಯ ಎಸ್.ಎನ್.ರಾಮಸ್ವಾಮಿ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version