Bengaluru, Karnataka : Cinema Movie Theatre ಗಳಲ್ಲಿ 100% ಆಸನಗಳ ಭರ್ತಿಗೆ ಅನುಮತಿ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber of Commerce) ಪದಾಧಿಕಾರಿಗಳು ವಿಧಾನಸೌಧದಲ್ಲಿ ಬುಧವಾರ ಕಂದಾಯ ಸಚಿವ ಆರ್.ಅಶೋಕ (Minister of Revenue R. Ashoka) ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಸಭೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ “ವಾಣಿಜ್ಯ ಮಂಡಳಿ ನಿಯೋಗ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಶೇ 100 ರಷ್ಟು ಆಸನಗಳ ಭರ್ತಿಗೆ ಸಂಬಂಧಿಸಿದಂತೆ ಸಮಗ್ರ ವರದಿ ಒಳಗೊಂಡ ಮನವಿ ನೀಡುವಂತೆ ತಿಳಿಸಿದ್ದು ಅದನ್ನು ಇವತ್ತು ಸಲ್ಲಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಶೇ 100 ಚಿತ್ರ ಮಂದಿರ ಭರ್ತಿಗೆ ಅನುಮತಿ ಇದೆ. ಚಿತ್ರರಂಗ ಕಷ್ಟದಲ್ಲಿದ್ದು ಸಾಕಷ್ಟು ಚಲನಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಮನವಿಯನ್ನು ತಜ್ಞರ ಮುಂದಿಟ್ಟು ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ. ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ” ಎಂದು ಹೇಳಿದರು.