Bengaluru: ಕ್ರೀಡಾ ಪ್ರಾಧಿಕಾರ ರಚನೆಯಾದರೂ (Sports Authority) ಯಾವುದೇ ಸ್ಪಷ್ಟ ಪ್ರಗತಿ ಕಾಣದ ಹಿನ್ನೆಲೆ, ಮುಖ್ಯಮಂತ್ರಿಯವರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧದಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. “ಪ್ರಾಧಿಕಾರ ಸ್ಥಾಪನೆಯ ಉದ್ದೇಶವೇ ಈಡೇರದಿದ್ದರೆ, ಇದರಿಂದ ಏನು ಪ್ರಯೋಜನ?” ಎಂದು ಸಿಎಂ ಪ್ರಶ್ನಿಸಿದರು. ಪ್ರಾಧಿಕಾರದ ಸಭೆಗಳನ್ನು ನಿಯಮಿತವಾಗಿ ನಡೆಸಬೇಕೆಂದು ಅವರು ಸೂಚಿಸಿದರು.
ಪ್ರಮುಖ ಸೂಚನೆಗಳು
- ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಾದರಿಯಲ್ಲಿ ಕ್ರೀಡಾ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಅಧ್ಯಯನ ಮಾಡಿ ಕ್ರಮ ಕೈಗೊಳ್ಳಲು ಸೂಚನೆ.
- ದಸರಾ ಕ್ರೀಡಾಕೂಟ ಆರಂಭವಾಗುವವರೆಗೂ ಪ್ರಾಧಿಕಾರ ಕ್ರಿಯಾಶೀಲವಾಗಬೇಕು.
- 176 ತರಬೇತುದಾರರ ನೇಮಕಾತಿಗೆ ವಿಳಂಬವಾದುದರ ಬಗ್ಗೆ ಕಠಿಣ ತರಾಟೆ.
- ಪ್ರತಿ ಜಿಲ್ಲೆಯಲ್ಲಿ ಕಡ್ಡಾಯವಾಗಿ ಉಪ ನಿರ್ದೇಶಕರ ನಿಯೋಜನೆ.
- ಪ್ರಾಧಿಕಾರದ ಸಭೆ, ಆಡಿಟ್, ನೇಮಕಾತಿ ಪ್ರತಿ ವರ್ಷ ನಡೆಯಬೇಕು. ತಪ್ಪಿದರೆ ಕ್ರಮ.
ರಾಷ್ಟ್ರೀಯ-ಅಂತಾರಾಷ್ಟ್ರೀಯ ಕ್ರೀಡಾಕೂಟಗಳು
- ರಾಷ್ಟ್ರೀಯ ಕ್ರೀಡಾಕೂಟಕ್ಕೆ ಸರಿಯಾದ ಮಾರ್ಗಸೂಚಿ ಸಿದ್ಧಪಡಿಸಬೇಕು.
- ಕನಿಷ್ಠ 15 ರಾಷ್ಟ್ರಗಳ ಪಾಲ್ಗೊಳ್ಳುವಿಕೆ ಖಚಿತಪಡಿಸದರೆ ಅಂತಾರಾಷ್ಟ್ರೀಯ ಕ್ರೀಡಾಕೂಟ ಅನುಮತಿಸಬಾರದು.
- ಸುಳ್ಳು ಸಂಸ್ಥೆಗಳಿಗೆ ಕಡಿವಾಣ ಹಾಕಿ, ನಿಜವಾದ ಸಂಸ್ಥೆಗಳಿಗೆ ಪ್ರೋತ್ಸಾಹ.
ಇತರೆ ವಿಷಯಗಳು
- ಕಂಬಳವನ್ನು ಗ್ರಾಮೀಣ ಕ್ರೀಡೆಯಾಗಿ ಗುರುತಿಸಿ ಪ್ರೋತ್ಸಾಹ.
- ಕ್ರೀಡಾಕೂಟಗಳಿಗೆ ಆನ್ಲೈನ್ ಅನುದಾನ ವ್ಯವಸ್ಥೆ.
- ಕಂಠೀರವ ಕ್ರೀಡಾಂಗಣದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ತ್ವರಿತ ಜಾರಿಗೆ ಸೂಚನೆ.
- ಪ್ರೇಕ್ಷಕರ ಸುರಕ್ಷತೆಗಾಗಿ ಗ್ಯಾಲರಿಗಳ ದುರಸ್ತಿ.
- ಜಿಮ್, ಶೌಚಾಲಯ, ಟ್ರ್ಯಾಕ್‌ಗಳ ಸುಧಾರಣೆಗೆ ಪ್ರಸ್ತಾವನೆ.
ಆಹಾರ ಮತ್ತು ಹಾಸ್ಟೆಲ್ ಗುಣಮಟ್ಟ
- ಕ್ರೀಡಾಪಟುಗಳಿಗೆ ಪೌಷ್ಠಿಕ ಆಹಾರ ಕಲ್ಪನೆ.
- ಹಾಸ್ಟೆಲ್‌ನಲ್ಲಿ ಆಹಾರದ ಗುಣಮಟ್ಟ ಪರಿಶೀಲನೆಗಾಗಿ ಸರ್ಪ್ರೈಸ್ ಭೇಟಿ.
- ಲೋಪ ಕಂಡರೆ ವಾರ್ಡನ್‌ಗಳ ವಿರುದ್ಧ ಕ್ರಮ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಕ್ರೀಡಾಂಗಣಕ್ಕೆ ಅನುದಾನ ನೀಡುವಂತೆ ವಿನಂತಿಸಿದರು. ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹಾಗೂ ಇತರ ಅಧಿಕಾರಿಗಳು.