Coldplay concert ಟಿಕೆಟ್‌ಗಳ ಕಪ್ಪು ಮಾರುಕಟ್ಟೆ ಮಾರಾಟದ ಕುರಿತು ANI ವರದಿ ಸಂಬಂಧಿಸಿದಂತೆ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ (EOW) ಬುಕ್‌ಮೈಶೋನ (BookMyShow) ಮಾತೃಸಂಸ್ಥೆ Big Tree Entertainment ನ CEO Ashish Hemrajani ಮತ್ತು ಕಂಪನಿಯ ತಾಂತ್ರಿಕ ಮುಖ್ಯಸ್ಥರಿಗೆ ಸಮನ್ಸ್ ನೀಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಗಳನ್ನು ನೀಡಲು ಇಬ್ಬರೂ ಅಧಿಕಾರಿಗಳು ಶನಿವಾರ, ಸೆಪ್ಟೆಂಬರ್ 28, 2024 ರಂದು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕಾಗುತ್ತದೆ.
ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಜನವರಿ 19 ರಿಂದ 21, 2025 ರವರೆಗೆ ನಡೆಯಲಿರುವ ಕೋಲ್ಡ್‌ಪ್ಲೇಯ ಮುಂಬರುವ ಸಂಗೀತ concert ಟಿಕೆಟ್‌ಗಳ ಕಪ್ಪು ಮಾರುಕಟ್ಟೆ ಮರುಮಾರಾಟದಲ್ಲಿ BookMyShow ತೊಡಗಿಸಿಕೊಂಡಿದೆ ಎಂದು ಆರೋಪಿಸಿ ವಕೀಲ ಅಮಿತ್ ವ್ಯಾಸ್ ಅವರು ಸಲ್ಲಿಸಿದ ದೂರಿನ ನಂತರ ತನಿಖೆ ನಡೆಸಲಾಗಿದೆ. ಮೂಲ ಬೆಲೆ ₹ 2,500 ರ ಟಿಕೆಟ್‌ಗಳನ್ನು ಮೂರನೇ ವ್ಯಕ್ತಿಗಳು ಮತ್ತು ಪ್ರಭಾವಿಗಳು ₹ 3 ಲಕ್ಷಕ್ಕೆ ಮರುಮಾರಾಟ ಮಾಡುತ್ತಿದ್ದಾರೆ ಎಂದು ವ್ಯಾಸ್ ಹೇಳಿಕೊಂಡಿದ್ದಾರೆ.
EOW ಈಗಾಗಲೇ ವ್ಯಾಸ್ ಅವರ ಹೇಳಿಕೆಯನ್ನು ದಾಖಲಿಸಿದ್ದು, ಆಪಾದಿತ ticket scalping ನಲ್ಲಿ ಭಾಗಿಯಾಗಿರುವ ಹಲವಾರು ದಲ್ಲಾಳಿಗಳನ್ನು ಗುರುತಿಸಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು, ಇನ್ನೂ ಹಲವಾರು ಸಂಬಂಧಪಟ್ಟ ವ್ಯಕ್ತಿಗಳನ್ನು ಕರೆಸುವ ಸಾಧ್ಯತೆಯಿದೆ.