Bengaluru: ವಿಧಾನಸಭಾ ಚರ್ಚೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಡುವೆ ಹಾಸ್ಯ-ಟಾಂಗ್‌ಗಳಿಂದ ಕೂಡಿದ ಚರ್ಚೆ ನಡೆಯಿತು.
- ಅಧಿಕಾರ-ಉಚ್ಛಾಟನೆ ಕುರಿತ ಟಾಂಗ್‌ಗಳು
- ಯತ್ನಾಳ್, “ನಿಮಗೂ ನಮ್ಮ ಸಿಎಂಗಳು ಬಾದಾಮಿಗೆ ಅನುದಾನ ಕೊಟ್ಟಿದ್ದರು” ಎಂದು ಹೇಳಿದಾಗ, ಸಿಎಂ ಸಿದ್ದರಾಮಯ್ಯ “ನೀವು ಬಿಜೆಪಿಯಿಂದ ಉಚ್ಛಾಟನೆ ಆಗಿದ್ದೀರಲ್ಲಾ” ಎಂದು ಹಾಸ್ಯಿಸಿದರು.
- ಅದಕ್ಕೆ ಯತ್ನಾಳ್, “ನಿಮ್ಮನ್ನೂ ದೇವೇಗೌಡ್ರು ಉಚ್ಛಾಟನೆ ಮಾಡಿದ್ದರು. ಉಚ್ಛಾಟನೆ ಆದವರೇ ಸಿಎಂ ಆಗ್ತಾರೆ” ಎಂದು ತಿರುಗೇಟು ನೀಡಿದರು.
- ಹೊಸ ಪಕ್ಷ ಕುರಿತ ಚರ್ಚೆ
- ಸಿಎಂ, “ನೀವು ಹೊಸ ಪಕ್ಷ ಮಾಡಿದ್ರೆ ಅಧಿಕಾರಕ್ಕೆ ಬರಬಹುದು” ಎಂದರು.
- ಯತ್ನಾಳ್, “ನಾವು ನಾನ್-ಅಡ್ಜಸ್ಟ್ಮೆಂಟ್ ಪಾರ್ಟಿ ಮಾಡ್ತೀವಿ. ನಮ್ಮ ಪಕ್ಷದಿಂದ ಬಿಜೆಪಿ ನಷ್ಟವಾಗಬಾರದು, ನಿಮಗೆ ಲಾಭವಾಗಬಾರದು” ಎಂದು ಹೇಳಿದರು.
- ಇದಕ್ಕೆ ಸಿಎಂ, “ನಮಗೆ ಲಾಭವಾಗಬೇಕಾದರೆ ನೀವು ಹೊಸ ಪಕ್ಷ ಕಟ್ಟಲೇಬೇಕು” ಎಂದು ಮತ್ತೆ ಕಿಚಾಯಿಸಿದರು.
- ಮತ ಹಾಗೂ ವೋಟುಗಳ ಬಗ್ಗೆ ಮಾತಿನ ಚಾಟಿ
- ಯತ್ನಾಳ್, “ನೀವು ಮತ್ತೆ ಸಿಎಂ ಆಗಲ್ಲ, ಆಗ ನಿಮ್ಮ ಮತಗಳು ನಮಗೆ ಬರುತ್ತವೆ” ಎಂದರು.
- ಸಿಎಂ, “ನಮ್ಮ ವೋಟು ಯಾವತ್ತೂ ನಿಮಗೆ ಬರಲ್ಲ. ನೀವು ಅಲ್ಪಸಂಖ್ಯಾತರು, ಪರಿಶಿಷ್ಟರ ವಿರೋಧಿಗಳು” ಎಂದು ಹೇಳಿದರು.
- ಜೆಡಿಎಸ್ ಬಗ್ಗೆ ವ್ಯಂಗ್ಯ
- ಸಿಎಂ, “ಜೆಡಿಎಸ್ ಈಗ ಬಿಜೆಪಿಯ ಜೊತೆ ಸೇರಿಕೊಂಡಿದೆ, ಮುಂದೆ ಇನ್ನೂ ಕುಸಿಯಲಿದೆ. ವಿಲೀನ ಆಗಿಬಿಡಿ” ಎಂದು ಹೇಳಿದರು.
- ಜೆಡಿಎಸ್ ಸದಸ್ಯರಿಗೆ, “ನಿಮ್ಮ ಬಳಿ ಸಿದ್ಧಾಂತವಿಲ್ಲ. ನಾನು ಇದ್ದಾಗ 59 ಸೀಟು, ಈಗ 18ಕ್ಕೆ ಇಳಿದಿದ್ದೀರಿ” ಎಂದು ಟೀಕಿಸಿದರು.
- ಬಿಜೆಪಿ-ಜೆಡಿಎಸ್ ಸರ್ಕಾರದ ಭವಿಷ್ಯದ ಬಗ್ಗೆ
- ಸಿಎಂ, “2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ, ಜೆಡಿಎಸ್‌ಗೆ ಅವಕಾಶ ಇಲ್ಲ” ಎಂದರು.
- ಆರ್. ಅಶೋಕ್ ಪ್ರತಿಕ್ರಿಯಿಸಿ, “ಅದನ್ನು ತೀರ್ಮಾನಿಸುವವರು ಮತದಾರರು. ಮುಂದಿನ ಚುನಾವಣೆಯಲ್ಲಿ ನಾವು 175 ಸೀಟು ಗೆಲ್ಲುತ್ತೇವೆ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.