Home Business Commercial LPG Cylinder ದರದಲ್ಲಿ ಇಳಿಕೆ

Commercial LPG Cylinder ದರದಲ್ಲಿ ಇಳಿಕೆ

Commercial LPG cylinder

ನವದೆಹಲಿ, ಏಪ್ರಿಲ್ 1: ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ LPG ಸಿಲಿಂಡರ್ ದರವನ್ನು (Commercial LPG cylinder) ಕಡಿಮೆ ಮಾಡಿದ್ದು, ಇದರಿಂದ ವ್ಯವಹಾರಗಳು ಮತ್ತು ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.

ಈ ಹೊಸ ದರವು ಇಂದು (ಏಪ್ರಿಲ್ 1)ರಿಂದ ಜಾರಿಗೆ ಬಂದಿದೆ. 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹41 ಇಳಿಕೆಯಾಗಿದ್ದು, ದೆಹಲಿಯಲ್ಲಿ ಈಗ ₹1,762 ಕ್ಕೆ ಲಭ್ಯ.

ಪ್ರಮುಖ ನಗರಗಳಲ್ಲಿ ಪರಿಷ್ಕೃತ ದರ

  • ಮುಂಬೈ: ₹1,714.50 (ಹಿಂದಿನ ₹1,755.50)
  • ಕೋಲ್ಕತ್ತಾ: ₹1,872 (ಹಿಂದಿನ ₹1,913)
  • ಚೆನ್ನೈ: ₹1,924.50 (ಹಿಂದಿನ ₹1,965.50)

ತೈಲ ಕಂಪನಿಗಳು ಪ್ರತಿ ತಿಂಗಳ 1ನೇ ತಾರೀಖಿನಂದು ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಿಸುತ್ತವೆ. ಮಾರ್ಚ್ 1 ರಂದು ವಾಣಿಜ್ಯ ಸಿಲಿಂಡರ್ ದರವನ್ನು ₹6 ಹೆಚ್ಚಿಸಲಾಗಿತ್ತು.

ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ.

  • ದೆಹಲಿ: ₹803
  • ಕೋಲ್ಕತ್ತಾ: ₹829
  • ಮುಂಬೈ: ₹802.50
  • ಚೆನ್ನೈ: ₹818.50

2022ರಲ್ಲಿ ವಾಣಿಜ್ಯ ಸಿಲಿಂಡರ್ ದರದಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿತ್ತು. ಏಪ್ರಿಲ್ 2022ರಲ್ಲಿ ₹249.50-₹268.50ರಷ್ಟು ಹೆಚ್ಚಾಗಿ, ದೆಹಲಿಯಲ್ಲಿ ₹2,406 ತಲುಪಿತ್ತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version