
Belagavi: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮ (Holi festival celebration) ಬಳಿಕ ಎರಡು ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯ ಘರ್ಷಣೆಗೆ ಕಾರಣವಾಯಿತು. ಒಬ್ಬ ಯುವಕ ವಾಟ್ಸಾಪ್ ಸ್ಟೇಟಸ್‌ನಲ್ಲಿ ಅಂಬೇಡ್ಕರ್ ಕುರಿತು ಪೋಸ್ಟ್ ಮಾಡಿದ್ದು, ಇದರಿಂದ ವಾಗ್ವಾದ ಹುಟ್ಟಿಕೊಂಡಿತು. ನಂತರ, ಕೆಲವು ಯುವಕರು ಸೇರಿ ಅಂಬೇಡ್ಕರ್ ಪ್ರತಿಮೆ ಸುತ್ತಲಿನ ಕಾಂಪೌಂಡ್ ಕೆಡವಿದ ಘಟನೆ ನಡೆದಿದೆ.
ಈ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ, ಅಂಬೇಡ್ಕರ್ ಕಾಲೋನಿಯ ಜನರು ಮತ್ತು ಬೇರೊಂದು ಸಮುದಾಯದ ಜನರ ನಡುವೆ ಕಲ್ಲು ತೂರಾಟ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಸದ್ಯ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಬೆಳಗಾವಿಯಿಂದ ಎರಡು ಡಿಆರ್ ತಂಡಗಳನ್ನು ರವಾನಿಸಲಾಗಿದೆ.
ಬೆಳಗಾವಿ ಭಾಗದಲ್ಲಿ ನೈತಿಕ ಪೊಲೀಸ್ಗಿರಿಯ ಪ್ರಕರಣಗಳು ಹೆಚ್ಚುತ್ತಿರುವದರಿಂದ, ಬೇರೆ ಸಮುದಾಯದ ಯುವತಿಯೊಂದಿಗೆ ಮಾತನಾಡಿದ ಯುವಕನ ಮೇಲೆ ಹಲ್ಲೆ ನಡೆದ ಪ್ರಕರಣದ ವರದಿ ಬಂದಿದೆ. ಅಲ್ಲಾವುದ್ದೀನ್ ಪೀರ್ಜಾದೆ ಎಂಬ ಯುವಕನನ್ನು ಆರು ಜನರ ಗುಂಪೊಂದು ಹಲ್ಲೆ ಮಾಡಿದ್ದು, ಆತ ಪೊಲೀಸರಿಗೆ ದೂರು ನೀಡಿದ್ದಾನೆ.
ಪೊಲೀಸರು ಕ್ರಮ ಕೈಗೊಂಡು ಆರೋಪಿಗಳ ಪೈಕಿ ನಾಲ್ವರನ್ನು ಬಂಧಿಸಿದ್ದು, ಇಬ್ಬರು ತಲೆಮರೆಸಿಕೊಂಡಿದ್ದಾರೆ. ಬಂಧಿತರನ್ನು ಸಾವ್ಗಾಂವ್ ಮೂಲದ ಸಂತೋಷ್ ಜಾಧವ್, ಸುದೇಶ್ ಪಾಟೀಲ್ ಮತ್ತು ಅಂಗೋಲ್ ಪ್ರದೇಶದ ಸುಮಿತ್ ಮೋರ್ ಹಾಗೂ ಜಯ್ ಇಂಚಲ್ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.