New Delhi: ಈ ವರ್ಷ ಭಾರತದ ಕಂಪನಿಗಳು (Indian companies) QIP (Qualified Institutional Placement) ಮೂಲಕ ಹೊಸ ದಾಖಲೆ ನಿರ್ಮಿಸಿ 1.13 ಲಕ್ಷ ಕೋಟಿ ರೂ ಬಂಡವಾಳ ಸಂಗ್ರಹಿಸಿವೆ. ಇದುವರೆಗೆ ಯಾವುದೇ ವರ್ಷದಲ್ಲಿ ಈ ಮೊತ್ತದಷ್ಟು ಬಂಡವಾಳ ಕ್ಯೂಐಪಿ ಮೂಲಕ ಸಂಗ್ರಹಿಸಲಾಗಿರಲಿಲ್ಲ.
80 ಕಂಪನಿಗಳು 1.13 ಲಕ್ಷ ಕೋಟಿ ರೂ ಸಂಗ್ರಹಿಸಿದೆ. ಕಳೆದ ವರ್ಷ ಹೋಲಿಸಿದರೆ, ಈ ವರ್ಷ ಫಂಡಿಂಗ್ ಮೊತ್ತವು ಮೂರು ಪಟ್ಟು ಹೆಚ್ಚಾಗಿದೆ. 2020 ರಲ್ಲಿ 25 ಕಂಪನಿಗಳು 80,816 ಕೋಟಿ ರೂ ಸಂಗ್ರಹಿಸಿದ್ದರು.
ಗೋದ್ರೇಜ್ ಪ್ರಾಪರ್ಟೀಸ್ ಮತ್ತು ಕೆಇಐ ಇಂಡಸ್ಟ್ರೀಸ್ ಈಗಾಗಲೇ ಕ್ಯೂಐಪಿ ಮೂಲಕ ಹೆಚ್ಚಿನ ಬಂಡವಾಳ ಸಂಗ್ರಹಿಸಲು ಯತ್ನಿಸುತ್ತಿವೆ. ಈವರೆಗೆ 8,000 ಕೋಟಿ ರೂ ಮೊತ್ತದಷ್ಟು ಬಂಡವಾಳಕ್ಕೆ ಇವು ಯತ್ನಿಸುತ್ತಿವೆ.
ಕ್ಯೂಐಪಿ ಮಾಹಿತಿ: QIP (Qualified Institutional Placement) ಎಂಬುದು ಕಂಪನಿಗಳಿಗೆ ಹೂಡಿಕಾರರಿಂದ ಸಾಲ ಪಡೆಯುವ ಒಂದು ವಿಧಾನ. ಕ್ಯೂಐಬಿ (ಮ್ಯೂಚುವಲ್ ಫಂಡ್‌ಗಳು, ಇನ್ಶೂರೆನ್ಸ್ ಕಂಪನಿಗಳು, ಬ್ಯಾಂಕುಗಳು) ಮೂಲಕ ಕಂಪನಿಗಳು ಷೇರುಗಳನ್ನು ಅಥವಾ ಕನ್ವರ್ಟಬಲ್ ಸೆಕ್ಯೂರಿಟಿಗಳನ್ನು ವಿತರಿಸಿ ಈ ಫಂಡಿಂಗ್ ಪಡೆಯುತ್ತವೆ.