Delhi: ಭಾರತದ ತೆರಿಗೆ ವ್ಯವಸ್ಥೆಯನ್ನು ಸುಧಾರಣೆಗೊಳಿಸಿ, ವ್ಯಾಪಾರದ ಸರಳತೆ ಮತ್ತು ಆರ್ಥಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಭಾರತೀಯ ಕೈಗಾರಿಕಾ ಒಕ್ಕೂಟ (CII-Confederation of Indian Industry) ಕೆಲವು ಪ್ರಮುಖ ಶಿಫಾರಸುಗಳನ್ನು ಮುಂದಿಟ್ಟಿದೆ.
ಮುಖ್ಯ ಶಿಫಾರಸುಗಳು
ಜಿಎಸ್ಟಿ ದರಗಳು ತರ್ಕಬದ್ಧವಾಗಲಿ: CII ಅಧ್ಯಕ್ಷ ರಾಜೀವ್ ಮೆಮಾನಿ ಹೇಳುವಂತೆ, ಅಗತ್ಯ ವಸ್ತುಗಳಿಗೆ 5% GST ಇರಲಿ, ಐಷಾರಾಮಿ ವಸ್ತುಗಳು ಮತ್ತು ಸಿಂತ್ ಸರಕುಗಳಿಗೆ 28% ಗರಿಷ್ಠ ದರ ಇರಲಿ. ಉಳಿದ ಎಲ್ಲ ವಸ್ತುಗಳಿಗೆ 12% ರಿಂದ 18% ರವರೆಗೆ ಒಂದೇ ಪ್ರಮಾಣಿತ ದರ ಇರಬೇಕು ಎಂದು ಅವರು ಸೂಚಿಸಿದ್ದಾರೆ.
ನೇರ ತೆರಿಗೆ ಸರಳೀಕರಣ: ಆದಾಯ ತೆರಿಗೆ ಕಾನೂನುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಸರಳಗೊಳಿಸಬೇಕು. ಹೊಸ ಆದಾಯ ತೆರಿಗೆ ಮಸೂದೆಯನ್ನು ಶೀಘ್ರ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಶ್ರೇಣೀಕೃತ ಕಸ್ಟಮ್ಸ್ ಸುಂಕ ರಚನೆ: ದೇಶೀಯ ಉತ್ಪಾದನೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕಸ್ಟಮ್ಸ್ ಸುಂಕವನ್ನು ಶ್ರೇಣೀಬದ್ಧವಾಗಿ ರೂಪಿಸಬೇಕೆಂದು ಸೂಚನೆ.
ಎಲ್ಲ ರಾಜ್ಯಗಳಿಗೆ ಒಂದೇ ರೀತಿಯ ಲೆಕ್ಕಪತ್ರ ಪರಿಶೀಲನೆ: ಪ್ರತಿ ರಾಜ್ಯದಲ್ಲಿ ಬೇರೆ ಬೇರೆಯಾದ ಜಿಎಸ್ಟಿ ಆಡಿಟ್ ವಿಧಾನ ಬದಲಾಗಿ, ಎಲ್ಲೆಡೆ ಒಂದೇ ರೀತಿಯ ನಿಯಮಗಳು ಇರಬೇಕು. ಇದರಿಂದ ವ್ಯಾಪಾರಿಗಳಿಗೆ ಯಾವುದೇ ಗೊಂದಲವಿಲ್ಲದೆ ನಿರ್ವಹಣೆ ಸುಲಭವಾಗುತ್ತದೆ.
ರಾಷ್ಟ್ರೀಯ ಮೇಲ್ಮನವಿ ಪ್ರಾಧಿಕಾರ ಸ್ಥಾಪನೆ: GST ಗೆ ಸಂಬಂಧಿಸಿದ ವಾದ-ವಿವಾದಗಳನ್ನು ಬಗೆಹರಿಸಲು ‘ನ್ಯಾಷನಲ್ ಅಪೀಲೆಟ್ ಅಥಾರಿಟಿ’ ಎಂಬ ಉನ್ನತ ಪ್ರಾಧಿಕಾರವನ್ನು ತಕ್ಷಣ ಸ್ಥಾಪಿಸಬೇಕು.
ಪೆಟ್ರೋಲಿಯಂ, ವಿದ್ಯುತ್, ರಿಯಲ್ ಎಸ್ಟೇಟ್ ಜಿಎಸ್ಟಿ ವ್ಯಾಪ್ತಿಗೆ: ಈ ಕ್ಷೇತ್ರಗಳನ್ನೂ ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು CII ಒತ್ತಾಯಿಸಿದೆ.
ಕ್ಯಾಸ್ಕೇಡಿಂಗ್ ತೆರಿಗೆ ತೆಗೆದುಹಾಕುವ ಸಲಹೆ: ಒಂದೇ ವಸ್ತು ಮೇಲೆ ಅನೇಕ ಹಂತಗಳಲ್ಲಿ ತೆರಿಗೆ ವಿಧಿಸಬಾರದು. ಇದರಿಂದ ಗ್ರಾಹಕರಿಗೆ ಹೆಚ್ಚುವರಿ ಬೆಲೆ ತೀರಿಸುವ ಅವಶ್ಯಕತೆ ಬರುತ್ತದೆ. ಹಾಗಾಗಿ, ಎಲ್ಲ ಹಂತಗಳನ್ನು ಜಿಎಸ್ಟಿ ಅಡಿಯಲ್ಲಿ ತರಬೇಕು ಎಂದು ಸಲಹೆ ನೀಡಲಾಗಿದೆ.
CII ಪ್ರಸ್ತಾಪಿಸಿದ ಈ ಮಾರ್ಗಸೂಚಿಗಳು ಜಾರಿಗೆ ಬಂದರೆ, ತೆರಿಗೆ ವ್ಯವಸ್ಥೆ ಹೆಚ್ಚು ಸರಳವಾಗುತ್ತೆ, ವ್ಯಾಪಾರ ಸುಲಭವಾಗುತ್ತೆ ಮತ್ತು ಭಾರತದಲ್ಲಿ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸ್ಪರ್ಧಾತ್ಮಕವಾಗುತ್ತದೆ ಎನ್ನಲಾಗಿದೆ.