back to top
18.2 C
Bengaluru
Thursday, August 14, 2025
HomeHealthಮಲವಿಸರ್ಜನೆ ಪ್ರಕ್ರಿಯೆಯನ್ನು ನಿರ್ಲಕ್ಷಿಸುವುದು health ಗೆ ಹಾನಿಕಾರಕ

ಮಲವಿಸರ್ಜನೆ ಪ್ರಕ್ರಿಯೆಯನ್ನು ನಿರ್ಲಕ್ಷಿಸುವುದು health ಗೆ ಹಾನಿಕಾರಕ

- Advertisement -
- Advertisement -

ಬೆಳಿಗ್ಗೆ ಎದ್ದ ತಕ್ಷಣ ಮಲವಿಸರ್ಜನೆ ಮಾಡುವುದು ಆರೋಗ್ಯದ (health) ನಿಲುವಿಗಾಗಿ ಅತ್ಯಂತ ಮುಖ್ಯ. ಆದರೆ, ಕೆಲವು ಜನರು ಸಮಯದ ಅಭಾವ ಅಥವಾ ನೈರ್ಮಲ್ಯ ಕಾಳಜಿಯಿಂದ ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸುತ್ತಾರೆ. ಇದು ದೀರ್ಘಕಾಲದಲ್ಲಿ ಹೃದಯಾಘಾತ, (heart attack) ಮಲಬದ್ಧತೆ, (constipation) ಗುದನಾಳದ (rectal) ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಒಂದು ಅಥವಾ ಎರಡು ಸಂದರ್ಭಗಳಲ್ಲಿ ಮಲವನ್ನು ಹಿಡಿದಿಟ್ಟುಕೊಳ್ಳುವುದು ಹಾನಿಕಾರಕವಲ್ಲ, ಆದರೆ ಇದನ್ನು ಆಗಾಗ ಮಾಡುವುದರಿಂದ ಮಲಬದ್ಧತೆ, ಉರಿಯೂತ ಮತ್ತು ತೀವ್ರವಾದ ತೊಡಕುಗಳಿಗೆ ಕಾರಣವಾಗಬಹುದು, ಇದು ಅಂತಿಮವಾಗಿ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

ಪರಿಣಾಮಗಳು

ಗುದನಾಳದ ಹಿಗ್ಗುವಿಕೆ: ತಜ್ಞರ ಪ್ರಕಾರ, ಮಲವನ್ನು ನಿರಂತರವಾಗಿ ತಡೆಹಿಡಿಯುವುದರಿಂದ ಗುದನಾಳದ ಭಾಗದ ಸ್ನಾಯುಗಳು ಹಾನಿಯಾಗಬಹುದು, ಇದು ಗುದನಾಳದ ಹಿಗ್ಗುವಿಕೆಗೆ (Prolapse) ಕಾರಣವಾಗುತ್ತದೆ. ಇದರಿಂದ ತೀವ್ರವಾದ ನೋವು ಮತ್ತು ಅಸಹನೆಯ ಪರಿಸ್ಥಿತಿ ಉಂಟಾಗುತ್ತದೆ.

ಮೂಲವ್ಯಾಧಿ ಮತ್ತು ಹೃದಯಾಘಾತ: ಮಲ ತಡೆಹಿಡಿಯುವ ಅಭ್ಯಾಸವು ಮೂಲವ್ಯಾಧಿ ಉಂಟುಮಾಡಿ, ರಕ್ತದೊತ್ತಡ ಹೆಚ್ಚಿಸುವ ಮೂಲಕ ಹೃದ್ರೋಗದ ಅಪಾಯವನ್ನು 27% ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಶುದ್ಧ ಕರುಳಿಗಾಗಿ ಅನುಸರಿಸಬೇಕಾದ ಕ್ರಮಗಳು

  • ನಾರಿನಂಶ ಹೆಚ್ಚುವ ಆಹಾರ ಸೇವನೆ ಹಣ್ಣು, ತರಕಾರಿಗಳನ್ನು ಹೆಚ್ಚಾಗಿ ತಿನ್ನಿ.
  • ಪ್ರತಿದಿನ ನೀರು ಕುಡಿಯುವುದು, ಕನಿಷ್ಠ 7-8 ಲೋಟ ನೀರು ಕುಡಿಯಿರಿ.
  • ವ್ಯಾಯಾಮದ ಮಹತ್ವ, ದೈನಂದಿನ ವ್ಯಾಯಾಮದ ಮೂಲಕ ದೇಹ ಚುರುಕಾಗುತ್ತದೆ.
  • ಶೌಚಾಲಯದ ನೈರ್ಮಲ್ಯವಿಲ್ಲದ ಕಾರಣದಿಂದ ತಡೆಯಬೇಡಿ, ಕಚೇರಿ ಅಥವಾ ಹೊರಗಡೆ ಇದ್ದರೂ, ಶೌಚಕ್ಕೆ ಪ್ರಚೋದನೆ ಬಂದಾಗ ಹೋಗಿ.
  • ನಿಯಮಿತ ಶೌಚ, ಪ್ರತಿ ಬೆಳಗ್ಗೆ ಮಲವಿಸರ್ಜನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

ಆರೋಗ್ಯಕರ ಜೀವನ ಶೈಲಿ ದೀರ್ಘಕಾಲದ ಆರೋಗ್ಯಕ್ಕೆ ಅಗತ್ಯ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page