
ತೆಲಂಗಾಣದ (Telangana) ಜಿಲ್ಲಾ ನ್ಯಾಯಾಲಯದಲ್ಲಿ, (district court) ಅಪರಾಧಿಯೊಬ್ಬನು ಜಗದ್ಗಿರಿಗುಟ್ಟ ಪೊಲೀಸ್ ಠಾಣೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾದ ನಂತರ ಕೋಪಗೊಂಡು, ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿದೆ.
ಫೆಬ್ರವರಿ 11, 2025 ರಂದು, ಸರ್ದಾರ್ ಶ್ಯಾಮ್ ಕುರ್ತಿ, ಅಲಿಯಾಸ್ ಕಾಮ್ ಸಿಂಗ್‌ಗೆ ಕೊಲೆ ಯತ್ನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಲಾಯಿತು. ಈ ವೇಳೆಯಲ್ಲಿ, ಅವರು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದು ಕೋಪವನ್ನು ವ್ಯಕ್ತಪಡಿಸಿದರು.
ಇದರಿಂದ ಆವರಣದಲ್ಲಿ ಗದ್ದಲವಾಗಿದ್ದು, ಸ್ಥಳದಲ್ಲಿದ್ದ ವಕೀಲರು ಅಪರಾಧಿಯನ್ನು ತಡೆದು, ಪೊಲೀಸರು ಆತನನ್ನು ವಶಕ್ಕೆ ಪಡೆದರು. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
ಇದೀಗ ಇದೇ ನ್ಯಾಯಾಲಯದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಎರಡು ದಿನಗಳ ಹಿಂದೆ, ಮತ್ತೊಬ್ಬ ಅಪರಾಧಿ ಕರಣ್ ಸಿಂಗ್ ಅವರೂ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದರು.