back to top
22.6 C
Bengaluru
Thursday, October 31, 2024
HomeHealthCovid-19 ಔಷಧಿ Molnupiravir ಗಂಭೀರ ಅಡ್ಡ ಪರಿಣಾಮಗಳನ್ನು ಹೊಂದಿದೆ - ICMR

Covid-19 ಔಷಧಿ Molnupiravir ಗಂಭೀರ ಅಡ್ಡ ಪರಿಣಾಮಗಳನ್ನು ಹೊಂದಿದೆ – ICMR

- Advertisement -
- Advertisement -

New Delhi : ಇತ್ತೀಚೆಗೆ ಡ್ರಗ್ ರೆಗ್ಯುಲೇಟರ್‌ನಿಂದ Covid-19 ಚಿಕಿತ್ಸೆಗಾಗಿ ಅನುಮೋದನೆಯನ್ನು ಪಡೆದುಕೊಂಡಿರುವ ಆಂಟಿವೈರಲ್ ಡ್ರಗ್ ಮೊಲ್ನುಪಿರವಿರ್ (Antiviral Drug Molnupiravir) ಅನ್ನು ಗಂಭೀರ ಅಡ್ಡ ಪರಿಣಾಮಗಳನ್ನು ಹೊಂದಿರುವ ಕಾರಣ ಆರೋಗ್ಯ ಸಚಿವಾಲಯ, ಇಂಡಿಯನ್ ಕೌನ್ಸಿಲ್ ಶಿಫಾರಸು ಮಾಡಿದ ರಾಷ್ಟ್ರೀಯ Covid-19 ಕ್ಲಿನಿಕಲ್ ಪ್ರೋಟೋಕಾಲ್‌ನಲ್ಲಿ ಸೇರಿಸಲಾಗಿಲ್ಲ ಎಂದು ವೈದ್ಯಕೀಯ ಸಂಶೋಧನೆಯ (ICMR) ಮಹಾನಿರ್ದೇಶಕ Dr. ಬಲರಾಮ್ ಭಾರ್ಗವ (Dr. Balram Bhargava) ಹೇಳಿದ್ದಾರೆ.

ಔಷಧ ತಯಾರಕರಾದ ಸಿಪ್ಲಾ (Cipla), ಸನ್ ಫಾರ್ಮಾ (Sun Pharma) ಮತ್ತು ಡಾ ರೆಡ್ಡೀಸ್ ಲ್ಯಾಬೊರೇಟರೀಸ್ (Dr Reddy’s Laboratories) ಸೇರಿದಂತೆ 13 ಭಾರತೀಯ ಔಷಧೀಯ ಕಂಪನಿಗಳು ಈ ಔಷಧವನ್ನು ತಯಾರಿಸುತ್ತಿವೆ. US ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ರಿಡ್ಜ್‌ಬ್ಯಾಕ್ ಬಯೋಥೆರಪ್ಯೂಟಿಕ್ಸ್ ಅಮೆರಿಕದ ಫಾರ್ಮಾ ದೈತ್ಯ ಮೆರ್ಕ್ ಸಹಯೋಗದೊಂದಿಗೆ ಈ ಔಷಧಿಯನ್ನು ಅಭಿವೃದ್ಧಿಪಡಿಸಿದೆ. ಅನೇಕರಿಂದ ಕೋವಿಡ್ ವಿರುದ್ಧ ರಾಮಬಾಣವೆಂದೇ ಬಣ್ಣಿಸಲ್ಪಟ್ಟಿದ್ದ ಈ ಆಂಟಿ-ವೈರಲ್ ಔಷಧ, ಕರೋನವೈರಸ್ನ ಜೆನೆಟಿಕ್ ಕೋಡ್ನಲ್ಲಿ ದೋಷಗಳನ್ನು ಉಂಟುಮಾಡಿ, ಅದನ್ನು ಮತ್ತಷ್ಟು ಪುನರಾವರ್ತಿಯಾಗುವುದನ್ನು ತಡೆಯುತ್ತದೆ.

“ಸೌಮ್ಯ ಪ್ರಕರಣಗಳಲ್ಲಿ ಈ ಔಷಧಿ ನೀಡಿದ 1,433 ರೋಗಿಗಳ ಕಾಯಿಲೆಯಲ್ಲಿ 3% ಕಡಿತ ಕಂಡುಬಂದುದನ್ನು ಆಧರಿಸಿ US ಮೊಲ್ನುಪಿರವಿರ್ ಗೆ ಅನುಮೋದನೆ ನೀಡಿತ್ತು. ಆದಾಗ್ಯೂ, ಈ ಔಷಧವು ಪ್ರಮುಖ ಸುರಕ್ಷತಾ ಕಾಳಜಿಗಳನ್ನು ಹೊಂದಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಇದು ಟೆರಾಟೋಜೆನಿಸಿಟಿ, ಮ್ಯುಟಾಜೆನಿಸಿಟಿಗೆ ಕಾರಣವಾಗಬಹುದು ಮತ್ತು ಇದು ಕಾರ್ಟಿಲೆಜ್ ಹಾನಿಯನ್ನು ಉಂಟುಮಾಡಬಹುದು ಮತ್ತು ಸ್ನಾಯುಗಳಿಗೆ ಹಾನಿಯಾಗಬಹುದು” ಎಂದು ಭಾರ್ಗವ ಹೇಳಿದ್ದಾರೆ.

“ಹೆಚ್ಚು ಮುಖ್ಯವಾಗಿ, ಈ ಔಷಧಿಯನ್ನು ಪಡೆದವರು ಗರ್ಭನಿರೋಧಕವನ್ನು ಮೂರು ತಿಂಗಳವರೆಗೆ ಬಳಸಬೇಕಾಗುತ್ತದೆ, ಏಕೆಂದರೆ ಆ ಅವಧಿಯಲ್ಲಿ ಗರ್ಭಧರಿಸಿದ ಮಗುವಿಗೆ ಟೆರಾಟೋಜೆನಿಕ್ ಪ್ರಭಾವದ ಸಮಸ್ಯೆಗಳಾಗಬಹುದು. ಆದ್ದರಿಂದ, ಇದನ್ನು ರಾಷ್ಟ್ರೀಯ ಕ್ಲಿನಿಕಲ್ ಪ್ರೋಟೋಕಾಲ್‌ನಲ್ಲಿ ಸೇರಿಸಲಾಗಿಲ್ಲ. WHO, UK ಸಹ ಅದನ್ನು ಸೇರಿಸಿಲ್ಲ” ಎಂದು ಅವರು ಹೇಳಿದ್ದಾರೆ.

“ಟೆರಾಟೋಜೆನಿಸಿಟಿ ಭ್ರೂಣದ ಬೆಳವಣಿಗೆಯಲ್ಲಿ ದೋಷಗಳನ್ನು ಉಂಟುಮಾಡುವ ಸಾಮರ್ಥ್ಯವಾಗಿದೆ, ಜೊತೆಗೆ ಮ್ಯುಟಾಜೆನಿಸಿಟಿಯು ಜೀವಕೋಶಗಳ ಆನುವಂಶಿಕ ರಚನೆಯಲ್ಲಿ ಬದಲಾವಣೆಗಳನ್ನು ತರುವ ಆತಂಕವಿರುತ್ತದೆ” ಎಂದು ಭಾರ್ಗವ ತಿಳಿಸಿದ್ದಾರೆ.

Molnupiravir, ಮೂಲತಃ ಫಾರ್ಮಾ ಕಂಪನಿ ಮರ್ಕ್ ಅಭಿವೃದ್ಧಿಪಡಿಸಿದ್ದು, ಆರಂಭದಲ್ಲಿ Covid ರೋಗಿಗಳ ಆಸ್ಪತ್ರೆಗೆ ದಾಖಲಾತಿ ಮತ್ತು ಸಾವಿನ ಪ್ರಮಾಣದಲ್ಲಿ 50% ಕಡಿತವನ್ನು ಪ್ರತಿಪಾದಿಸಿತ್ತು.


Image: ANI

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page