India : ಭಾರತದಲ್ಲಿ Covid-19 Omicron ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆಯ ಬೂಸ್ಟರ್ ಡೋಸ್ (Vaccine Booster Dose) ನೀಡಿಕೆಯ ಅಗತ್ಯವನ್ನು ತಿಳಿಯಲು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ನೇತೃತ್ವದ ಕೇಂದ್ರ ಸರ್ಕಾರವು ಅಧ್ಯಯನವನ್ನು ಪ್ರಾರಂಭಿಸಿದೆ.
ಆರು ತಿಂಗಳ ಹಿಂದೆ ಎರಡನೇ ಡೋಸ್ ಕೋವಿಡ್ -19 ಲಸಿಕೆಯನ್ನು ಪಡೆದ 3,000 ಕ್ಕೂ ಹೆಚ್ಚು ಜನರನ್ನು ಅಧ್ಯಯನದಲ್ಲಿ ಭಾಗಿಯೋಗಿಸಿಕೊಳ್ಳಲಿದೆ. ಈ ಅಧ್ಯಯನದಲ್ಲಿ ಭಾರತದಲ್ಲಿ ಬಳಕೆಯಲ್ಲಿರುವ ಕೋವಿಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ. ಲಸಿಕೆಗಳ ಪರಿಣಾಮವನ್ನು ಅಧ್ಯಯನ ನಡೆಸಲಿದೆ. ಡಿಪಾರ್ಟ್‌ಮೆಂಟ್ ಆಫ್ ಬಯೋಟೆಕ್ನಾಲಜಿಯ ಪ್ರೀಮಿಯರ್ ಇನ್‌ಸ್ಟಿಟ್ಯೂಟ್ ಟ್ರಾನ್ಸ್‌ಲೇಶನಲ್ ಹೆಲ್ತ್ ಸೈನ್ಸ್ ಅಂಡ್ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ (Department of Biotechnology’s premier institute Translational Health Science and Technology Institute -THSTI) ಈ ಅಧ್ಯಯನವನ್ನು ನಡೆಸಲಿವೆ ಎಂದು News18 ವರದಿ ಮಾಡಿದೆ.