back to top
26 C
Bengaluru
Thursday, October 9, 2025
HomeIndiaNew Delhiಮೊದಲ ದಿನವೇ 40 ಲಕ್ಷ ಯುವಕರಿಗೆ Covid-19 ಲಸಿಕೆ

ಮೊದಲ ದಿನವೇ 40 ಲಕ್ಷ ಯುವಕರಿಗೆ Covid-19 ಲಸಿಕೆ

- Advertisement -
- Advertisement -

New Delhi : 15–18 ವರ್ಷದ ಯುವಕರಿಗೆ Covid–19 ಲಸಿಕೆಗಾಗಿ ನೀಡುವ ಪ್ರಕ್ರಿಯೆ ದೇಶದಲ್ಲಿ ಪ್ರಾರಂಭವಾಗಿದ್ದು, ಸೋಮವಾರ ದೇಶದಾದ್ಯಂತ ವಿವಿಧ ಭಾಗಗಳಲ್ಲಿ ಸರತಿ ಸಾಲಲ್ಲಿ ನಿಂತು ಮಕ್ಕಳು ಲಸಿಕೆ ಪಡೆಯುತ್ತಿರುವ ದೃಶ್ಯಗಳು ಕಂಡು ಬಂತು. 15–18 ರ ವಯಸ್ಸಿನ ಒಟ್ಟು 7.4 ಕೋಟಿ ಮಕ್ಕಳು ದೇಶದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿದ್ದು, ಸೋಮವಾರ ರಾತ್ರಿ 8 ಗಂಟೆಯ ಹೊತ್ತಿಗೆ ಸುಮಾರು 40 ಲಕ್ಷ ಮಕ್ಕಳು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ (Dr Mansukh Mandaviya) ತಿಳಿಸಿದ್ದಾರೆ.

ಲಸಿಕಾ ಕೇಂದ್ರಗಳನ್ನು (Vaccination Centres) ಪೋಸ್ಟರ್‌ಗಳು ಮತ್ತು ಬಲೂನ್‌ಗಳಿಂದ ಅಲಂಕರಿಸಲಾಗಿತ್ತು ಯುವಕರನ್ನು ಉತ್ತೇಜಿಸಲು Selfie Spot ಗಳನ್ನು ಇರಿಸಲಾಗಿತ್ತು. ಶಾಲೆ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಲಸಿಕೆ ಪಡೆದ ಮಕ್ಕಳಿಗೆ ಹಲವೆಡೆ ಉಡುಗೊರೆಗಳನ್ನೂ ನೀಡಲಾಯಿತು.

ಲಸಿಕೆಗೆ ನೋಂದಣಿ ಪ್ರಕ್ರಿಯೆ (Covid-19 Vaccine Registration) ಜನವರಿ ಒಂದರಂದೇ ಪ್ರಾರಂಭವಾಗಿದ್ದು, ನೋಂದಣಿ ಮಾಡಿಸದೆ ನೇರವಾಗಿ ಲಸಿಕಾ ಕೇಂದ್ರಕ್ಕೆ ಹೋದವರಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಕಳೆದ ವರ್ಷದ ಜನವರಿ 16 ರಂದು ಪ್ರಾರಂಭವಾದ ಲಸಿಕಾ ಅಭಿಯಾನವು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್‌ ಮುಂಚೂಣಿ ಹೋರಾಟಗಾರರು (Covid Frontline Workers), 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಲಸಿಕೆ ಪಡೆಯಲು ಅವಕಾಶ ನೀಡಲಾಗಿತ್ತು. ನಂತರ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ಪಡೆಯಲು ಅನುಮತಿ ನೀಡಲಾಗಿತ್ತು.


Image: ANI

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page