
New Delhi:: ಯಾವತ್ತೂ ಸಾಲ ಮಾಡದವರು ಅಥವಾ ಕ್ರೆಡಿಟ್ ಕಾರ್ಡ್ ಬಳಸದೆ ಇರುವವರಿಗೆ ಕ್ರೆಡಿಟ್ ಸ್ಕೋರ್ (CIBIL Score) ಇರುವುದಿಲ್ಲ. ಇಂಥವರು ಮೊದಲ ಬಾರಿ ಸಾಲಕ್ಕೆ ಅರ್ಜಿ ಹಾಕಿದಾಗ, ಬ್ಯಾಂಕುಗಳು “ಸ್ಕೋರ್ ಇಲ್ಲ” ಎಂದು ಸಾಲ ನಿರಾಕರಿಸುವ ಸಾಧ್ಯತೆ ಇತ್ತು.
ಈ ಕುರಿತು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದ್ದು – ಮೊದಲ ಸಲ ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಪರಿಶೀಲನೆ ಕಡ್ಡಾಯವಲ್ಲ ಎಂದು ತಿಳಿಸಿದೆ.
ಕೇಂದ್ರ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಯಲ್ಲಿ ಮಾತನಾಡಿ, ಆರ್ಬಿಐ (RBI) ಸಾಲ ಮಂಜೂರಿಗೆ ಯಾವುದೇ ಕನಿಷ್ಠ ಕ್ರೆಡಿಟ್ ಸ್ಕೋರ್ ನಿಯಮ ಮಾಡಿಲ್ಲ ಎಂದಿದ್ದಾರೆ. 2025ರ ಜನವರಿ 6ರಂದು ಆರ್ಬಿಐ ಕೂಡಾ, ಕ್ರೆಡಿಟ್ ಹಿಸ್ಟರಿ ಇಲ್ಲವೆಂದು ಸಾಲ ತಿರಸ್ಕರಿಸಬಾರದು ಎಂದು ಸಲಹೆ ನೀಡಿತ್ತು ಎಂದು ಅವರು ನೆನಪಿಸಿದ್ದಾರೆ.
ಸಾಲ ನೀಡುವಾಗ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ತಮ್ಮ ವ್ಯವಹಾರಿಕ ನಿರ್ಧಾರ ಅಥವಾ ನಿಯಂತ್ರಣ ಮಾರ್ಗಸೂಚಿಗಳ ಆಧಾರದಲ್ಲಿ ತೀರ್ಮಾನ ಕೈಗೊಳ್ಳಬೇಕು. ಕ್ರೆಡಿಟ್ ಸ್ಕೋರ್ ಅಂಶಗಳಲ್ಲಿ ಒಂದಷ್ಟೇ ಎಂದು ಸಚಿವರು ಹೇಳಿದ್ದಾರೆ.
- ಕ್ರೆಡಿಟ್ ಸ್ಕೋರ್ ಬಗ್ಗೆ ಮಾಹಿತಿ
- 300 ರಿಂದ 900ರ ತನಕ ಅಂಕಗಳನ್ನು ಕ್ರೆಡಿಟ್ ಏಜೆನ್ಸಿಗಳು ನೀಡುತ್ತವೆ.
- ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸರಿಯಾಗಿ ತೀರಿಸಿದರೆ ಸ್ಕೋರ್ ಹೆಚ್ಚು ಬರುತ್ತದೆ.
- ಪಾವತಿಯಲ್ಲಿ ವಿಳಂಬ ಮಾಡಿದರೆ ಸ್ಕೋರ್ ಕಡಿಮೆ ಆಗುತ್ತದೆ.
- 300 ಕನಿಷ್ಠ, 900 ಗರಿಷ್ಠ ಅಂಕ.
ಭಾರತದಲ್ಲಿ ನಾಲ್ಕು ಏಜೆನ್ಸಿಗಳು ಕ್ರೆಡಿಟ್ ಸ್ಕೋರ್ ನೀಡುತ್ತವೆ: ಸಿಬಿಲ್ (CIBIL), ಈಕ್ವಿಫ್ಯಾಕ್ಸ್ (Equifax), ಸಿಆರ್ಐಎಫ್ (CRIF), ಎಕ್ಸ್ಪೀರಿಯನ್ (Experian).
ಇವುಗಳ ಮೂಲಕ ಬ್ಯಾಂಕುಗಳು ಗ್ರಾಹಕರ ಸಾಲದ ಇತಿಹಾಸ (Credit Report) ಪರಿಶೀಲಿಸುತ್ತವೆ.