Mumbai: ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಯಲ್ಲಿದ್ದಾಗಲೇ (cricket match) 35 ವರ್ಷದ ಕ್ರಿಕೆಟಿಗ ಇಮ್ರಾನ್ ಪಟೇಲ್ (Cricketer Imran Patel) ಹೃದಯ ಸ್ತಂಭನದಿಂದ ಕುಸಿದು ಸಾವನ್ನಪ್ಪಿದ್ದಾರೆ.
ಪಟೇಲ್ ಅವರು ಆರಂಭಿಕ ಬ್ಯಾಟರ್ ಆಗಿ ಆಟವನ್ನು ಪ್ರಾರಂಭಿಸಿ, ಕೆಲ ಸಮಯ ಪಿಚ್‌ನಲ್ಲಿ ಕಳೆದ ನಂತರ ಎದೆ ಮತ್ತು ತೋಳಿನಲ್ಲಿ ನೋವು ತೊಂದರೆಯನ್ನು ಅಂಪೈರ್ಗೆ ತಿಳಿಸಿದ್ದಾರೆ. ಅವರನ್ನು ಪೆವಿಲಿಯನ್‌ಗೆ ತೆರಳಲು ಅನುಮತಿ ನೀಡಲಾಯಿತು. ಪೆವಿಲಿಯನ್‌ಗೆ ಹಿಂತಿರುಗುವ ವೇಳೆ ಪಟೇಲ್ ಕುಸಿದು ಬಿದ್ದರು.
ನೇರಪ್ರಸಾರವಾಗುತ್ತಿದ್ದ ಈ ಘಟನೆ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಸಹ ಆಟಗಾರರು ತಕ್ಷಣ ಅವರ ನೆರವಿಗೆ ಬಂದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಅವರನ್ನು ಸಾವಿಗೀಡಾಗಿದ್ದಾರೆ ಎಂದು ಘೋಷಿಸಿದರು.
ಪಟೇಲ್ ಅವರು ತಮ್ಮ ಪತ್ನಿ ಮತ್ತು ಮೂರು ಮಕ್ಕಳನ್ನು ಅಗಲಿದ್ದಾರೆ. ಪಟೇಲ್‌ರ ಕಿರಿಯ ಮಗುವಿಗೆ ಕೇವಲ ನಾಲ್ಕು ತಿಂಗಳಾಗಿದೆ.
ಪಟೇಲ್ ಅವರು ಶಾರೀರಿಕವಾಗಿ ಸದೃಢರಾಗಿದ್ದರು, ಮತ್ತು ಅವರಿಗೆ ಯಾವುದೇ ವೈದ್ಯಕೀಯ ಇತಿಹಾಸವಿರಲಿಲ್ಲ. ಈ ದುರಂತವು ಆಟಗಾರರಲ್ಲೂ ಹಾಗೂ ಅಭಿಮಾನಿಗಳಲ್ಲೂ ಆಘಾತ ಮೂಡಿಸಿದೆ.