ಫೆಂಗಲ್ ಚಂಡಮಾರುತ (Cyclone Fengal) ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತಮಿಳುನಾಡಿಗೆ (Tamil Nadu) ಅಪ್ಪಳಿಸಲಿದೆ. ಹವಾಮಾನ ಇಲಾಖೆ ನ.26 ಮತ್ತು 27 ರಂದು ತಮಿಳುನಾಡಿನ ನಾಲ್ಕು ಜಿಲ್ಲೆಗಳಿಗೆ ರೆಡ್ ಅಲರ್ಟ್ ಹಾಗೂ ಹಲವೆಡೆ ಹವಾಮಾನ ಎಚ್ಚರಿಕೆಗಳನ್ನು ಹವಾಮಾನ ಇಲಾಖೆ (Meteorological Department) ಘೋಷಿಸಿದೆ. ನ.27 ರಂದು ಚಂಡಮಾರುತ ತೀವ್ರಗೊಳ್ಳಲಿದ್ದು, ಉತ್ತರ-ವಾಯುವ್ಯದ ದಿಕ್ಕಿನಲ್ಲಿ ಚಲಿಸಿ ತಮಿಳುನಾಡು ಕರಾವಳಿಗೆ ಹತ್ತಿಕೊಳ್ಳಲಿದೆ.
ಆಂಧ್ರಪ್ರದೇಶಕ್ಕೆ ಮಳೆಯ ಎಚ್ಚರಿಕೆಯನ್ನು ಸಹ ನೀಡಲಾಗಿದ್ದು ನ.26 ರಿಂದ 29 ರವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ನಾಗಪಟ್ಟಣಂ, ತಿರುವಾರುರ್, ಮೈಲಾಡುತುರೈ ಮತ್ತು ಕಾರೈಕಲ್ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಚಂಡಮಾರುತ ಪರಿಣಾಮ ಬೆಂಗಳೂರಿನ ಮೇಲೂ ಗೋಚರಿಸಲಿದ್ದು ಚಂಡಮಾರುತದ ಪರಿಣಾಮದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆ ಸಂಭವವಿದೆ. ಮೂರ್ರು ದಿನಗಳ ಕಾಲ ನಗರದ ಉಷ್ಣಾಂಶ ಸ್ಥಿರವಾಗಿದ್ದು, ಮಳೆಯ ಸಾಧ್ಯತೆ ಇದೆ.
ಮುಖ್ಯ ಎಚ್ಚರಿಕೆಗಳು
- ತಮಿಳುನಾಡಿನ ಚೆಂಗಲ್ಪಟ್ಟು, ವಿಲ್ಲುಪುರಂ, ತಂಜಾವೂರು, ಮತ್ತು ಶಿವಗಂಗೈ ಪ್ರದೇಶಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
- ಪುದುಚೇರಿ, ನಾಗಪಟ್ಟಣಂ ಸೇರಿದಂತೆ ಅಲರ್ಟ್ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.
ಹವಾಮಾನ ತಜ್ಞರ ಪ್ರಕಾರ, ಚಂಡಮಾರುತ ತೀವ್ರಗೊಳ್ಳುವ ಸಂಭವ ಹೆಚ್ಚಿರುವುದರಿಂದ ಸ್ಥಳೀಯ ಆಡಳಿತಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿವೆ.