Ramanagara : ಸಾತನೂರು ಹೋಬಳಿ ದಾಳಿಂಬ ಗ್ರಾಮದಲ್ಲಿ ಸೋಮವಾರ ಬಸವಣ್ಣ ದೇವರ (Dalimba Basavanna Devara Jathre) ಜಾತ್ರೆ ಮತ್ತು ಜೋಡಿ ಕೊಂಡದ ಪವಾಡ ಬಸಪ್ಪ ದೇವರ ಅಗ್ನಿ ಕುಂಡೋತ್ಸವ ಅದ್ದೂರಿಯಾಗಿ ನೆರೆವೇರಿತು.
ನೆರೆಯ ಗ್ರಾಮಗಳಿಂದ ಬಂದಿದ್ದ ಭಕ್ತರ ಸಮ್ಮುಖದಲ್ಲಿ ಜರುಗಿದ ಉತ್ಸವದಲ್ಲಿ ಬಸವೇಶ್ವರ ವಿಗ್ರಹ ಹೊತ್ತು ಅಗ್ನಿ ಕುಂಡೋತ್ಸವ ಪ್ರವೇಶಿಸಲಾಯಿತು. ಉತ್ಸವದ ನಂತರ ಗ್ರಾಮದ ಮನೆ ಮನೆಗೆ ತೆರಳಿದ ಉತ್ಸವ ಮೂರ್ತಿಗೆ ಗ್ರಾಮಸ್ಥರು ಭಕ್ತಿಯಿಂದ ಪೂಜೆ ಸಲ್ಲಿಸಿದರು.