back to top
24.1 C
Bengaluru
Saturday, July 19, 2025
HomeNewsDasara ರಜೆ: ಬೆಂಗಳೂರಿನಿಂದ Special Trains

Dasara ರಜೆ: ಬೆಂಗಳೂರಿನಿಂದ Special Trains

- Advertisement -
- Advertisement -

Bengaluru: ದಸರಾ ಹಬ್ಬದ (Dasara festival) ಪ್ರಯುಕ್ತ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಹೆಚ್ಚುವರಿ ರೈಲುಗಳು (additional trains) ಬೇಕು ಎಂಬ ಬೇಡಿಕೆ ಇದೆ. ಸಾಲು ಸಾಲು ರಜೆ ಸಂದರ್ಭದಲ್ಲಿ ಬಸ್ ಪ್ರಯಾಣ ದುಬಾರಿ, ರೈಲುಗಳಲ್ಲಿ ಸೀಟುಗಳು ಸಿಗುವುದಿಲ್ಲ ಎಂಬ ಆರೋಪವಿದೆ. ಆದ್ದರಿಂದ ವಿಶೇಷ ರೈಲುಗಳನ್ನು (special trains) ಓಡಿಸಿ ಎಂದು ಮನವಿ ಮಾಡಲಾಗುತ್ತದೆ.

ದಸರಾ ಹಬ್ಬದ (Dasara festival) ಪ್ರಯುಕ್ತ ಕರ್ನಾಟಕದ (Karnataka) 34 ರೈಲುಗಳಿಗೆ (34 Trains) ತಾತ್ಕಾಲಿಕ ಹೆಚ್ಚುವರಿ ಬೋಗಿಗಳ (Additional Coaches)ಜೋಡಣೆ ಮಾಡಲಾಗಿದೆ. ಈ ಮೂಲಕ ರೈಲ್ವೆ ಪ್ರಯಾಣಿಕರಿಗೆ ಹಬ್ಬದ ಸಂದರ್ಭದಲ್ಲಿ ಪ್ರಯಾಣಕ್ಕೆ ಅನುಕೂಲವಾಗಲಿದೆ.

ಈ ಬಗ್ಗೆ ರೈಲ್ವೆ ಇಲಾಖೆ (Railway Department) ಮಾಹಿತಿ ನೀಡಿದ್ದು, ” ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ನಿರೀಕ್ಷಿತ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ, ನೈರುತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಲಾಗಿದೆ ” ಎಂದು ತಿಳಿಸಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಫೇಸ್ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ‘ನವರಾತ್ರಿ ಮತ್ತು ವಿಜಯದಶಮಿಯ ಸಂಭ್ರಮಕ್ಕೆ ಬೆಂಗಳೂರಿನಿಂದ ಊರಿಗೆ ಬರುವ ಪ್ರಯಾಣಿಕರಿಗೆ ಟಿಕೇಟು ಸಿಗದ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ, ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯ ಮನವಿಯಂತೆ ನೈರುತ್ಯ ರೈಲ್ವೆಗೆ ನವಮಿ ಹಾಗೂ ವಿಜಯ ದಶಮಿಗೆ ವಿಶೇಷ ರೈಲು ಓಡಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page