ಗ್ರಾಮೀಣ ಪ್ರದೇಶಗಳಲ್ಲಿ internet ಬಳಕೆ ತೀವ್ರವಾಗಿ ಹೆಚ್ಚುತ್ತಿದೆ. ಇದರಿಂದ ಭಾರತೀಯ ಟೆಲಿಕಾಂ ಕಂಪನಿಗಳಿಗೆ ಪ್ರತಿ ಬಳಕೆದಾರರಿಂದ (ARPU) ಆದಾಯ ಹೆಚ್ಚಾಗಲು ಸಹಾಯವಾಗುತ್ತಿದೆ. ಟೆಲಿಕಾಂ ಕಂಪನಿಗಳು ಗ್ರಾಮೀಣ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತಿವೆ.
ಕ್ರಿಸಿಲ್ ರೇಟಿಂಗ್ಸ್ನ ವರದಿ ಪ್ರಕಾರ, 2020ರಿಂದ 2024ರ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ internet ಬಳಕೆ 59%ರಿಂದ 78%ಕ್ಕೆ ಏರಿದೆ. ನಗರ ಪ್ರದೇಶಗಳಲ್ಲಿ ಇದು 77%ರಿಂದ 90%ಕ್ಕೆ ಏರಿಕೆಯಾಗಿದ್ದು, ಗ್ರಾಮೀಣ ಪ್ರದೇಶ ಬಳಕೆ ಹೆಚ್ಚಾಗುತ್ತಿರುವುದು ಗಮನಾರ್ಹ.
Online ಸಂವಹನ, ಡಿಜಿಟಲ್ ಪಾವತಿಗಳು, ಸಾಮಾಜಿಕ ಮಾಧ್ಯಮ ಮತ್ತು ಇ-ಕಾಮರ್ಸ್ ಸೇವೆಗಳ ಬಳಕೆ ಹೆಚ್ಚಾಗಿರುವ ಕಾರಣ 2026 ರೊಳಗೆ ಗ್ರಾಮೀಣ ಡೇಟಾ ಬಳಕೆ ಇನ್ನಷ್ಟು 4-5%ರಷ್ಟು ಹೆಚ್ಚಾಗಲಿದೆ.
ಹೆಚ್ಚಿನ ಡೇಟಾ ಬಳಕೆ ಬೆಂಬಲಿಸಲು, ಟೆಲಿಕಾಂ ಕಂಪನಿಗಳು ಗ್ರಾಮೀಣ network ವಿಸ್ತರಣೆ, ಸ್ಪರ್ಧಾತ್ಮಕ ಬೆಲೆ ಯೋಜನೆಗಳು ಮತ್ತು ಸುಲಭ ಲಭ್ಯತೆ ಇರುವ ಸ್ಮಾರ್ಟ್ಫೋನ್ ಗಳನ್ನು ಒದಗಿಸುತ್ತಿವೆ.
ಗ್ರಾಮೀಣ ಬಳಕೆದಾರರಿಂದ ಬಂದ ಆದಾಯದ 55-60%ರಷ್ಟು ಭಾಗ ಟೆಲಿಕಾಂ ಸಂಸ್ಥೆಗಳಿಗೆ ದೊರಕಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಈ ಕಾರಣದಿಂದ, ಕಂಪನಿಗಳು ಸ್ಪೆಕ್ಟ್ರಮ್ ಖರೀದಿ ಮತ್ತು ಟೆಲಿಕಾಂ ಗೋಪುರಗಳಿಗೆ ಹೂಡಿಕೆ ಹೆಚ್ಚಿಸುತ್ತಿವೆ.
ಈ ಹೂಡಿಕೆಗಳ ಪರಿಣಾಮವಾಗಿ, 2025ರಿಂದ 2026 ರವರೆಗೆ ಟೆಲಿಕಾಂ ಉದ್ಯಮದ ಆದಾಯದಲ್ಲಿ 10-12% ವೃದ್ಧಿಯಾಗಲಿದೆ ಎಂದು ತಿಳಿಸಲಾಗಿದೆ.