Davanagere : ದಾವಣಗೆರೆ ಭೋವಿ ಗುರುಪೀಠದಲ್ಲಿ (Bhovi Gurupeetha) ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ (Sri Immadi Siddarameshwara Swamiji) ಸಾನ್ನಿಧ್ಯದಲ್ಲಿ ದಾವಣಗೆರೆ ಜಿಲ್ಲಾ ಭೋವಿ ಸಂಘದ (Bhovi Welfare Association) ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ ” ನಾನು ಎಂಬ ಭಾವ ಹೋಗಿ ನಾವು ಎಂಬ ಭಾವ ಬಂದಾಗ ಸಮಷ್ಠಿ ಉದ್ಧಾರ ಸಾಧ್ಯ. ವೈರುಧ್ಯಗಳಿದ್ದಲ್ಲಿ ವೈಮನಸ್ಸುಗಳು ಉಂಟಾಗುವುದು ಸಹಜ. ಆದ್ದರಿಂದ, ಎಲ್ಲರ ವಿಶ್ವಾಸಗಳಿಸಿ ಸಂಘಟನೆ ಕಟ್ಟಬೇಕು. ಒಂದು ವರ್ಷ ಸದಸ್ಯತ್ವ ಅಭಿಯಾನ ನಡೆಸಿ ಮುಂದಿನ ದಿನಗಳಲ್ಲಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಚುನಾವಣೆ ಮೂಲಕ ನಡೆಯಲಿ.” ಎಂದು ಹೇಳಿದರು.
ಪದಾಧಿಕಾರಿಗಳ ನೇಮಕ:
ಜಿಲ್ಲಾ ಭೋವಿ ಸಂಘಕ್ಕೆ ಅಧ್ಯಕ್ಷರಾಗಿ ಎಚ್. ಜಯ್ಯಣ್ಣ, ಗೌರವಾಧ್ಯಕ್ಷರಾಗಿ ಬಿ.ಟಿ. ಸಿದ್ದಪ್ಪ, ಕಾರ್ಯಧ್ಯಕ್ಷರಾಗಿ ವಿ. ಗೋಪಾಲ್, ಸಂಚಾಲಕರಾಗಿ ಬಿ.ಆರ್. ಅಂಜಿನಪ್ಪ ಬೆಂಚಕಟ್ಟೆ, ಪ್ರಧಾನ ಕಾರ್ಯದರ್ಶಿ ವಿ.ಶ್ರೀನಿವಾಸ ಚಿಕ್ಕಮ್ಮಣ್ಣಿ, ಕೋಶಾಧ್ಯಕ್ಷ ವಿ.ಇ. ವಿಜಯಕುಮಾರ್, ಜಿಲ್ಲಾ ಯುವ ಘಟಕದ ಧ್ಯಕ್ಷ ಎ.ಬಿ ನಾಗರಾಜ್. ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆಯಾಗಿ ಉಮಾಕುಮಾರ ಅವರನ್ನು ನೇಮಕ ಮಾಡಲಾಯಿತು.
ಉಪಾಧ್ಯಕ್ಷರಾಗಿ ಡಿ. ಶ್ರೀನಿವಾಸ, ಆರ್. ಶ್ರೀನಿವಾಸ, ಟಿ. ಸೋಮೇಶ್ ಶಿಲ್ಪಿ, ಹನುಮಂತಪ್ಪ ಬೆಂಕಿಕೆರೆ, ಎಲ್.ಎಂ. ಸಂತೋಷ್, ಅಜ್ಜಯ್ಯ ಚೀಲೂರು, ಹೆಚ್. ಚಂದ್ರಪ್ಪ, ಸಿ.ಎನ್. ವೀರಭದ್ರಪ್ಪ, ತಾಲ್ಲೂಕು ಘಟಕಗಳ ಅಧ್ಯಕ್ಷರಾಗಿ ಹರಿಹರ ಎಚ್. ಬ್ಯಾಂಕ್ ರಾಮಣ್ಣ, ಜಗಳೂರಿಗೆ ಸಿ. ದೇವರಾಜ, ಚನ್ನಗಿರಿ ಎಚ್. ಗದಗ ರಾಜಪ್ಪ, ಹೊನ್ನಾಳಿ ನಾಗರಾಜಪ್ಪ ಇವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಗಳಾಗಿ ಡಾ. ವೈ.ವಿ. ರೇವಣಸಿದ್ದಪ್ಪ, ಮಂಜಪ್ಪ ಹನುಮಸಾಗರ, ಎಸ್. ರವಿಕುಮಾರ್, ತಿಮ್ಮೇಶ್ ಮಾದೇನಹಳ್ಳಿ, ರೇವಣ್ಣ, ತಿರುಮಲ್ಲೇಶ್. ನಿರ್ದೇಶಕರಾಗಿ ಶಿವಮೂರ್ತಪ್ಪ, ರುದ್ರೇಶಿ, ಎಸ್.ಜಿ.ನಾಗರಾಜ ಪಾಮೇನಹಳ್ಳಿ, ಹುಚ್ಚಂಗಿಪುರ ನಾಗರಾಜ್, ರಾಜಪ್ಪ, ರಮೇಶ್, ಹರಿಹರ ಯುವ ಘಟಕ ತಾಲ್ಲೂಕು ಅಧ್ಯಕ್ಷರಾಗಿ ಹೊನ್ನಾಳಿ ಮಂಜು ತಿಮ್ಲಾಪುರ, ಜಗಳೂರು ಮಾರುತಿ ಪಲ್ಲಾಗಟ್ಟೆ, ಚನ್ನಗಿರಿ ರಾಜು ಗರಗ, ಹರಿಹರ ಕುಮಾರ, ಚಾಮರಾಜ್ ವಿವಿಧ ಘಟಕಗಳಿಗೆ ಪದಾಧಿಕಾರಿಗಳಾಗಿ ಆಯ್ಕೆಯಾದರು.