Sagara, Shivamogga : ಸಾಗರ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಆರೋಗ್ಯ ರಕ್ಷಾ ಸಮಿತಿ (Arogya Raksha Samithi) ಸಭೆ ನಡೆಸಿದ ನಂತರ Covid-19 ಮುಂಜಾಗ್ರತಾ ಕ್ರಮ ವಾಗಿ ಸಿದ್ಧಪಡಿಸಿರುವ ICU Ward ಗಳನ್ನು ಶಾಸಕ ಹರತಾಳು ಹಾಲಪ್ಪ (MLA Hartalu Halappa) ಪರಿಶೀಲಿಸಿದರು.
ನಂತರ ಮಾತನಾಡಿದ ಶಾಸಕರು “Covid-19 ಮೂರನೇ ಅಲೆಯನ್ನು ಎದುರಿಸಲು ತಾಲ್ಲೂಕು ಆಡಳಿತ ಸಿದ್ಧವಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ 100 ICU ಹಾಸಿಗೆ ಸಿದ್ಧಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ Oxygen ಘಟಕ ಕಾರ್ಯಾರಂಭ ಮಾಡಲಿದ್ದು ತುರ್ತು ಸಂದರ್ಭದಲ್ಲಿ ಆಮ್ಲಜನಕ ಒದಗಿಸಲು ಜಂಬೋ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 30 ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿದ್ದು, ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಪಾಳಿ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ. ತಾಲ್ಲೂಕಿನ ಬಂದಗದ್ದೆ, ಜಂಬಗಾರುವಿನಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲು ಸಿದ್ಧತೆಗಳು ಪೂರ್ಣ ಗೊಂಡಿದ್ದು ಅಗತ್ಯ ಬಿದ್ದಾಗ ಕೇಂದ್ರಗಳನ್ನು ತೆರೆಯಲಾಗುವುದು” ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಎಸ್. ಮೋಹನ್, ಉಪವಿಭಾಗಾಧಿಕಾರಿ ಡಾ. ನಾಗರಾಜ್ ಎಲ್., ಸರ್ಜನ್ ಡಾ.ಪ್ರಕಾಶ್ ಭೋಸ್ಲೆ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್., ಸದಸ್ಯ ಟಿ.ಡಿ. ಮೇಘರಾಜ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವಿನೋದ್ ರಾಜ್, ಜ್ಯೋತಿ ನಂಜುಂಡಸ್ವಾಮಿ, ಕೃಷ್ಣ ಶೇಟ್, ಸಂಜಯ್ ಕುಮಾರ್, ಸುರೇಶ್ ಕಂಬಳಿ ಉಪಸ್ಥಿತರಿದ್ದರು.