Bengaluru, Bangalore : ಬೆಂಗಳೂರಿನ ದಯಾನಂದ ಸಾಗರ ಪದವಿ ಪೂರ್ವ ಕಾಲೇಜು (Dayananda Sagar Pre University College) ವತಿಯಿಂದ ‘ಚಂದ್ರಮ್ಮ ಮತ್ತು ಆರ್.ದಯಾನಂದ ಸಾಗರ ಸ್ಮಾರಕ ಪ್ರಶಸ್ತಿ’ (Chandramma & R Dayananda Sagar Memorial Award) ಗಳನ್ನು ನೀಡಲು ಹೊಸ ಆವಿಷ್ಕಾರ (New Innovation) ಮತ್ತು ಘೋಷವಾಕ್ಯ (Tagline) ರಚಿಸುವ ಸ್ಪರ್ಧೆಗಳನ್ನು (Competition) ಏರ್ಪಡಿಸಲಾಗಿದ್ದು ಎಲ್ಲ ಸ್ಪರ್ಧೆಗಳು ಕಿರಿಯರು (9 ಮತ್ತು 10ನೇ ತರಗತಿ) ಹಾಗೂ ಹಿರಿಯರ (First ಮತ್ತು Second PU) ವಿಭಾಗಗಳಲ್ಲಿ ನಡೆಯಲಿವೆ.
ಹೊಸ ಆವಿಷ್ಕಾರ ಸ್ಪರ್ಧೆಯಲ್ಲಿ ಭಾಗವಹಿಸುವವರು ಯಾವುದೇ ವಿಷಯದ ಕುರಿತು ವಿಡಿಯೊ ಮಾಡಿ ಕಳುಹಿಸಬಹುದು. ಈ ಸ್ಪರ್ಧೆಯಲ್ಲಿ ತಂಡಗಳಾಗಿಯೂ ಭಾಗವಹಿಸಲು ಅವಕಾಶವಿದೆ.
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಘೋಷವಾಕ್ಯ ರಚನಾ ಸ್ಪರ್ಧೆಯಲ್ಲಿ ‘ಬೆಂಗಳೂರಿನ ವೃಷಭಾವತಿ ನದಿಯನ್ನು ಮಾಲಿನ್ಯದಿಂದ ರಕ್ಷಿಸಿ’ ಹಾಗೂ ‘ಪರಿಸರವನ್ನು ಪ್ಲಾಸ್ಟಿಕ್ ಮಾಲಿನ್ಯದಿಂದ ರಕ್ಷಿಸಿ’ ವಿಷಯ ಕುರಿತಾಗಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಆಕರ್ಷಕ ಘೋಷವಾಕ್ಯಗಳನ್ನು ರಚಿಸಬೇಕು.
ಸ್ಪರ್ಧಿಗಳು ಫೆಬ್ರವರಿ 28ರೊಳಗೆ ವಿಡಿಯೊ ಮತ್ತು ಘೋಷವಾಕ್ಯಗಳನ್ನು info-puc@dayanandasgar.edu ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಪ್ರಶಸ್ತಿಗೆ ಆಯ್ಕೆಯಾದ ಆವಿಷ್ಕಾರಗಳು ಮತ್ತು ಘೋಷವಾಕ್ಯಗಳನ್ನು ಮಾರ್ಚ್ 22ರಂದು ವಿಶ್ವವಿದ್ಯಾಲಯದಲ್ಲಿ ಪ್ರದರ್ಶಿಸಲಾಗುವುದು. ಅದೇ ದಿನ ಬಹುಮಾನ ವಿತರಣೆಯೂ ನಡೆಯಲಿದೆ’ ಎಂದು ದಯಾನಂದ ಸಾಗರ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಎಚ್.ಕುಮಾರ್ ಅವರು ತಿಳಿಸಿದ್ದಾರೆ.
ನೋಂದಣಿಗೆ 9620038938, 9538641740 ನಂಬರ್ ಗಳನು ಸಂಪರ್ಕಿಸಬಹುದು.
ಸ್ಪರ್ಧೆಗಳ ಎಲ್ಲ ವಿಭಾಗಗಳ ವಿಜೇತರಿಗೆ ಪ್ರಥಮ ಬಹುಮಾನ ₹15 ಸಾವಿರ , ದ್ವಿತೀಯ ಬಹುಮಾನ ₹12 ಸಾವಿರ ಹಾಗೂ ತೃತೀಯ ಬಹುಮಾನ ₹10 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಲಾಗಿದೆ.