back to top
20.8 C
Bengaluru
Thursday, October 9, 2025
HomeAutoHSRP ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ

HSRP ನಂಬರ್ ಪ್ಲೇಟ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಣೆ

- Advertisement -
- Advertisement -

Bengaluru: ಕರ್ನಾಟಕದಲ್ಲಿ HSRP (High Security Number Plate) ಅಳವಡಿಕೆಗೆ ಡಿಸೆಂಬರ್ 30ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. ಈಗಾಗಲೇ 1.45 ಕೋಟಿ ವಾಹನಗಳಿಗೆ HSRP ಅಳವಡಿಕೆ ಬಾಕಿಯಿದೆ. ಸರ್ಕಾರವು ಇದಕ್ಕೆ ಸಂಬಂಧಿಸಿದಂತೆ ಜಾಗೃತಿಯ ಕೊರತೆ ಎದುರಿಸುತಿದ್ದು, ಜನರಿಗೆ ಸೂಕ್ತ ಮಾಹಿತಿ ನೀಡಲು ತಪಾಸಣಿಯನ್ನು ಪ್ರಾರಂಭಿಸಿಲ್ಲ.

ಈ ಹಿಂದೆ ಸರ್ಕಾರವು ಹಲವು ಬಾರಿ ಗಡುವು ವಿಸ್ತರಣೆ ಮಾಡಿತ್ತು, ಆದರೆ ಶೇ. 45ಕ್ಕೂ ಹೆಚ್ಚು ವಾಹನ ಸವಾರರು ಇನ್ನೂ HSRP ಅಳವಡಿಸಿಲ್ಲ. ಹೀಗಾಗಿ, ಸರ್ಕಾರವು ಮತ್ತೊಮ್ಮೆ ಗಡುವನ್ನು ವಿಸ್ತರಿಸಿ, ಡಿಸೆಂಬರ್ 30ರವರೆಗೆ ಸರ್ವಾಧಿಕಾರವನ್ನು ನೀಡಿದೆ.

HSRP ನಂಬರ್ ಪ್ಲೇಟ್ ಅಳವಡಿಕೆಗೆ ಸಂಬಂಧಿಸಿದಂತೆ 2019ರ ಏಪ್ರಿಲ್ 1ನಂತರ ಖರೀದಿಸಿದ ಎಲ್ಲಾ ವಾಹನಗಳಿಗೆ ಈ ನಿಯಮವಿದೆ. ಈಗಲೂ ಗ್ರಾಮೀಣ ಜನತೆಗೆ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಸಬೇಕು ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ.

ಇನ್ನು ಹಲವರಿಗೆ ಇದನ್ನು ಎಲ್ಲಿ ಮಾಡಬೇಕು ಎಂಬುದು ಗೊತ್ತಿಲ್ಲ. ಇನ್ನು ಕೆಲವರಿಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡುವುದು ಗೊತ್ತಾಗದೇ ಸುಮ್ಮನಿದ್ದಾರೆ. ಒಟ್ಟಾರೆ, ಸರ್ಕಾರ ಇದಕ್ಕೆ ಸೂಕ್ತ ಕಾರ್ಯಕ್ರಮ ರೂಪಿಸದೇ ಶೇ.100 ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಆಗುವುದಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page